ಕರ್ನಾಟಕ

karnataka

ETV Bharat / state

ಡಿಕೆಶಿ ಕುಟುಂಬಕ್ಕೆ ಧೈರ್ಯ ತುಂಬಿದ ಆದಿಚುಂಚನಗಿರಿ ಶ್ರೀಗಳು - ಉಷಾ ಶಿವಕುಮಾರ್

ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನದಿಂದ ನೊಂದಿರುವ ಅವರ ಪತ್ನಿ ಉಷಾ ಶಿವಕುಮಾರ್ ಮತ್ತು ಪುತ್ರಿ ಐಶ್ವರ್ಯ, ಪುತ್ರ ಆಕಾಶ್​ಗೆ ಆದಿಚುಂಚನಗಿರಿಯ ಶ್ರೀಗಳು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.

ಆದಿಚುಂಚನಗಿರಿ ಶ್ರೀಗಳಿಂದ ಡಿಕೆಶಿ ಪತ್ನಿಗೆ ಸಾಂತ್ವನ

By

Published : Sep 9, 2019, 10:42 PM IST

Updated : Sep 10, 2019, 7:56 PM IST

ಬೆಂಗಳೂರು:ಪ್ರಭಾವಿ ರಾಜಕಾರಣಿ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನದಿಂದ ನೊಂದಿರುವ ಅವರ ಪತ್ನಿ ಹಾಗು ಮಕ್ಕಳನ್ನು ಆದಿಚುಂಚನಗಿರಿಯ ಶ್ರೀಗಳು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.

ಸದಾಶಿವ ನಗರದ ಡಿಕೆಶಿ ನಿವಾಸಕ್ಕೆ ತೆರಳಿದ ನಿರ್ಮಲಾನಂದ ಸ್ವಾಮೀಜಿಯವರು ಶಿವಕುಮಾರ್ ಅವರ ಕುಟುಂಬದವರಿಗೆ ಧೈರ್ಯ ತುಂಬಿ ಮುಂದೆ ಒಳ್ಳೆಯದು ಆಗುತ್ತದೆ ಎಂದಿದ್ದಾರೆ.

ಡಿಕೆಶಿ ಕುಟುಂಬಕ್ಕೆ ಧೈರ್ಯ ತುಂಬಿದ ಆದಿಚುಂಚನಗಿರಿ ಶ್ರೀಗಳು

ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್ ಅವರು ಇಡಿ ಬಂಧನದಿಂದ ತಮಗಾಗುತ್ತಿರುವ ವೇದನೆಯನ್ನ ಸ್ವಾಮೀಜಿ ಬಳಿ ನಿವೇದಿಸಿಕೊಂಡರು.

ಡಿ.ಕೆ.ಶಿವಕುಮಾರ್ ಪತ್ನಿ ಮತ್ತು ಮಕ್ಕಳಿಗೆ ಧೈರ್ಯ ಹೇಳುವ ಸಂದರ್ಭದಲ್ಲಿ ಡಿಕೆಶಿ ಅವರ ಪುತ್ರಿ ಐಶ್ವರ್ಯ, ಪುತ್ರ ಆಕಾಶ್, ಆದಿಚುಂಚನಗಿರಿ ಕಿರಿಯ ಸ್ವಾಮೀಜಿ ಸೌಮ್ಯನಾಥ ಶ್ರೀಗಳು ಹಾಗೂ ರಾಮನಗರ ಶಾಖಾಮಠದ ಅನ್ನದಾನೇಶ್ವರನಾಥ ಶ್ರೀಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Last Updated : Sep 10, 2019, 7:56 PM IST

ABOUT THE AUTHOR

...view details