ಕರ್ನಾಟಕ

karnataka

ETV Bharat / state

ಮೊದಲಿನಂತೆ ಲೋಕಾಯುಕ್ತ ಕಾರ್ಯ: ದೂರು ಸ್ವೀಕರಿಸಿ ತನಿಖೆಗೆ ಎಡಿಜಿಪಿ ಆದೇಶ - ಈಟಿವಿ ಭಾರತ ಕನ್ನಡ

ಪ್ರತಿಯೊಂದು ಜಿಲ್ಲೆಯಲ್ಲಿಯೂ ಲೋಕಾಯುಕ್ತ ಎಸ್ಪಿ ಕಚೇರಿಗಳಿವೆ. ಆಯಾ ವಿಭಾಗದ ಎಸ್ಪಿ, ಡಿವೈಎಸ್ಪಿ ಹಾಗೂ ಇನ್​​ಸ್ಪೆಕ್ಟರ್​ಗಳಿಗೆ ಎಡಿಜಿಪಿ ಆದೇಶಿಸಿದ್ದಾರೆ.

adgp-orders-to-receive-complaint-and-probe-to-lokayukta-officials
ಮೊದಲಿನಂತೆ ಲೋಕಾಯುಕ್ತ ಕಾರ್ಯ: ದೂರು ಸ್ವೀಕರಿಸಿ ತನಿಖೆಗೆ ಎಡಿಜಿಪಿ ಆದೇಶ

By

Published : Aug 26, 2022, 9:27 PM IST

ಬೆಂಗಳೂರು:ರಾಜ್ಯದಲ್ಲಿ‌ ಇಂದಿನಿಂದ ಲೋಕಾಯುಕ್ತ ಅಧಿಕೃತವಾಗಿ ಆರಂಭವಾಗಿದ್ದು‌ ಸಾರ್ವಜನಿಕರಿಂದ ಬರುವ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಆದೇಶ ಹೊರಡಿಸಿದ್ದಾರೆ.

ಹೈಕೋರ್ಟ್ ಆದೇಶದಂತೆ ಮೊದಲಿನಂತೆ ಲೋಕಾಯುಕ್ತ ಕಾರ್ಯ ನಿರ್ವಹಿಸಲಿದೆ.‌ ಇದಕ್ಕೆ ಬೇಕಾದ ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿರುವ ಲೋಕಾಯುಕ್ತ ಇನ್ಮುಂದೆ ಬರುವ ದೂರುಗಳನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಆಯಾ ವಿಭಾಗದ ಎಸ್ಪಿ, ಡಿವೈಎಸ್ಪಿ ಹಾಗೂ ಇನ್​​ಸ್ಪೆಕ್ಟರ್​ಗಳಿಗೆ ಎಡಿಜಿಪಿ ಆದೇಶಿಸಿದ್ದಾರೆ.

ಪ್ರತಿಯೊಂದು ಜಿಲ್ಲೆಯಲ್ಲಿಯೂ ಲೋಕಾಯುಕ್ತ ಎಸ್ಪಿ ಕಚೇರಿಗಳಿವೆ. ಅದೇ ಕಚೇರಿಗಳೇ ಇದೀಗ ಲೋಕಾ ಪೊಲೀಸ್ ಠಾಣೆಯಾಗಿ ತಲೆ ಎತ್ತಲಿದೆ‌. ಆಯಾ ಜಿಲ್ಲೆಗಳಲ್ಲಿ ಬರುವ ದೂರುಗಳನ್ನು ಸಾರ್ವಜನಿಕರು ಅಲ್ಲೇ ನೀಡಬಹುದಾಗಿದೆ. ಬೆಂಗಳೂರು ನಗರ ಪೊಲೀಸ್ ಠಾಣೆಯು ಲೋಕಾಯುಕ್ತ ಪ್ರಧಾನ ಕಚೇರಿಯಿಂದ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ:ಎಸಿಬಿ ರದ್ದು: ಲೋಕಾಯುಕ್ತದಲ್ಲಿ ಬಾಕಿಯಿರುವ ದೂರುಗಳೆಷ್ಟು?

ABOUT THE AUTHOR

...view details