ಕರ್ನಾಟಕ

karnataka

ETV Bharat / state

ಶಂಕಿತ ಉಗ್ರರ ತನಿಖೆ ಚುರುಕು: ಬಂಧನದ ಬಗ್ಗೆ ಮಾಹಿತಿ ನೀಡಿದ ಎಡಿಜಿಪಿ ಅಲೋಕ್‌ ಕುಮಾರ್ - ಜಬಿಉಲ್ಲಾ

ಯಾಸೀನ್ ಬೆಳಗಾವಿ ಜೈಲಿನಲ್ಲಿ ಇರುವ ಸಜಾಕೈದಿ ಕೆಲ ಉಗ್ರಗಾಮಿಗಳ ಸಂಪರ್ಕದಲ್ಲಿದ್ದ. ಸದ್ಯ ಆರೋಪಿಗಳನ್ನ ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ‌ ಎಂದು ಎಡಿಜಿಪಿ ಅಲೋಕ್‌ ಕುಮಾರ್ ಅವರು ತಿಳಿಸಿದ್ದಾರೆ.

ಎಡಿಜಿಪಿ ಅಲೋಕ್‌ ಕುಮಾರ್
ಎಡಿಜಿಪಿ ಅಲೋಕ್‌ ಕುಮಾರ್

By

Published : Sep 21, 2022, 9:24 PM IST

ಬೆಂಗಳೂರು: ಶಿವಮೊಗ್ಗದಲ್ಲಿ ಬಂಧಿತರಾಗಿರುವ ನಿಷೇಧಿತ ಸಂಘಟನೆಯ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ ಸಂಬಂಧ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ‌ ಎಡಿಜಿಪಿ ಅಲೋಕ್ ಕುಮಾರ್‌ ಅವರು ನಗರದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಎಡಿಜಿಪಿ ಅಲೋಕ್‌ ಕುಮಾರ್ ಅವರು ಮಾತನಾಡಿದರು

ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಿ ಶಿವಮೊಗ್ಗ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂಬುವರ ಮೇಲೆ ಈ ಹಿಂದೆ ಚಾಕು ಇರಿತ ಆಗಿತ್ತು. ಈ ಪ್ರಕರಣದಲ್ಲಿ ಮೊದಲಿಗೆ ಜಬಿಉಲ್ಲಾ ಎಂಬಾತನನ್ನ ಅರೆಸ್ಟ್ ಮಾಡಲಾಗಿತ್ತು. ವಿಚಾರಣೆ ನಡೆಸಿದಾಗ ಯಾಸೀನ್ ಜೊತೆ ಸಂಪರ್ಕ ಇರುವುದು ಗೊತ್ತಾಗಿತ್ತು‌‌. ಹೀಗಾಗಿ ಇಬ್ಬರನ್ನ ಬಂಧಿಸಲಾಗಿದೆ.

ಯಾಸೀನ್ ಬೆಳಗಾವಿ ಜೈಲಿನಲ್ಲಿ ಇರುವ ಸಜಾಕೈದಿ ಕೆಲ ಉಗ್ರಗಾಮಿಗಳ ಸಂಪರ್ಕದಲ್ಲಿದ್ದ. ಸದ್ಯ ಆರೋಪಿಗಳನ್ನ ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ‌ ಎಂದು ಅಲೋಕ್‌‌ ಕುಮಾರ್ ಅವರು ತಿಳಿಸಿದ್ದಾರೆ.

ಓದಿ:ರಾಮನಗರ: ರಸ್ತೆಯಲ್ಲಿ ಹುಟ್ಟುಹಬ್ಬ ಆಚರಿಸುವವರೇ ಹುಷಾರ್​ !

ABOUT THE AUTHOR

...view details