ಬೆಂಗಳೂರು: ನಾಳೆ ಭಾರತ- ಶ್ರೀಲಂಕಾ ನಡುವಿನ ಅಹರ್ನಿಶಿ ಟೆಸ್ಟ್ ಪಂದ್ಯದ ಸಂಬಂಧ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪ್ರತಿಕ್ರಿಯಿಸಿದ್ದು, ಕಳೆದೊಂದು ವಾರದಿಂದ ಮೈದಾನದ ಭದ್ರತೆಗೆ ಬೇಕಾದ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಕೆಲವು ಕಡೆಗಳಲ್ಲಿ ವೀಕ್ಷಣಾ ಗೋಪುರಗಳ ನಿರ್ಮಾಣ, ಮೈದಾನ ಮಾತ್ರವಲ್ಲದೇ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಕೂಡಾ ಶ್ವಾನ ದಳದಿಂದ ತಪಾಸಣೆ ನಡೆಸಿದ್ದೇವೆ. ಪಂದ್ಯದ ಐದೂ ದಿನ 700 ಜನ ಸಿಬ್ಬಂದಿ ಭದ್ರತೆಯ ಹೊಣೆ ವಹಿಸಲಿದ್ದಾರೆ ಎಂದರು.
ಇಬ್ಬರು ಡಿಸಿಪಿ, ಹತ್ತು ಜನ ಎಸಿಪಿ, 34 ಇನ್ಸ್ಪೆಕ್ಟರ್ಗಳು ಉಳಿದಂತೆ ಪಿಎಸ್ಐ, ಕಾನ್ಸ್ಟೇಬಲ್ಸ್ ಇರಲಿದ್ದಾರೆ. ಕೆಎಸ್ಆರ್ಪಿ ಸಿಬ್ಬಂದಿಯನ್ನು ಮೈದಾನದ ಸುತ್ತಲೂ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ವಹಿಸಲಾಗುವುದು ಎಂದು ತಿಳಿಸಿದರು.
ಟಿ20 ಪಂದ್ಯದಂತೆ ಮ್ಯೂಸಿಕ್ ಬಳಸಲು ಅನುಮತಿ:ಪಂದ್ಯಕ್ಕೆ ಅಭಿಮಾನಿಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶನಿವಾರ ಭಾನುವಾರ ಹಬ್ಬದ ವಾತಾವರಣವಿರಲಿದೆ. ಟಿ-20 ಪಂದ್ಯದಂತೆ ಮ್ಯೂಸಿಕ್ ಬಳಸಲು ಬಿಸಿಸಿಐ ಅನುಮತಿ ಸಿಕ್ಕಿದೆ ಎಂದು ಕೆಎಸ್ಸಿಎ ವಕ್ತಾರ ಖಜಾಂಚಿ ವಿನಯ್ ಮೃತ್ಯುಂಜಯ ತಿಳಿಸಿದರು.