ಕರ್ನಾಟಕ

karnataka

ETV Bharat / state

ಪರಿಷತ್ ಸದನ‌ ಕದನ: ಅಜೆಂಡಾದಲ್ಲಿ ಗೋ ಹತ್ಯೆ ನಿಷೇಧ ಬಿಲ್ ಸೇರ್ಪಡೆ, ಅವಿಶ್ವಾಸ ‌ನಿರ್ಣಯ ಮಿಸ್! - ಅಜೆಂಡಾದಲ್ಲಿ ಅವಿಶ್ವಾಸ ನಿರ್ಣಯ ಮಿಸ್

ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಪ್ರಸ್ತಾಪವನ್ನು ಅಜೆಂಡಾದಿಂದ ಕೈ ಬಿಡಲಾಗಿದೆ. ಹೀಗಾಗಿ ನಾಳಿನ ಒಂದು ದಿನದ ವಿಶೇಷ ಪರಿಷತ್ ಕಲಾಪ ಇನ್ನಷ್ಟು ಕುತೂಹಲ ಕೆರಳಿಸಿದೆ. ವಿಧಾನಸಭೆಯಲ್ಲಿ ಅಂಗೀಕಾರಗೊಂಡ ವಿಧೇಯಕ ನಾಳೆ ಪರಿಷತ್ ನಲ್ಲಿ ಮಂಡನೆಯಾಗುತ್ತಾ? ಅನ್ನೋದೇ ಎಲ್ಲರ ಕುತೂಹಲ.

addition-the-anti-cow-slaughter-prohibition-bill-on-the-agenda
ಪರಿಷತ್ ಸದನ‌

By

Published : Dec 14, 2020, 10:01 PM IST

ಬೆಂಗಳೂರು: ನಾಳೆ ನಡೆಯುವ ವಿಶೇಷ ಪರಿಷತ್ ಕಲಾಪದ ಕಾರ್ಯ ಕಲಾಪ ಪಟ್ಟಿಯಲ್ಲಿ ವಿವಾದಿತ ಗೋ ಹತ್ಯೆ ನಿಷೇಧ ವಿಧೇಯಕ ಮಂಡನೆಯನ್ನು ಸೇರ್ಪಡೆಗೊಳಿಸಲಾಗಿದೆ.

ಆದರೆ, ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಪ್ರಸ್ತಾಪವನ್ನು ಅಜೆಂಡಾದಿಂದ ಕೈ ಬಿಡಲಾಗಿದೆ. ಹೀಗಾಗಿ ನಾಳಿನ ಒಂದು ದಿನದ ವಿಶೇಷ ಪರಿಷತ್ ಕಲಾಪ ಇನ್ನಷ್ಟು ಕುತೂಹಲ ಕೆರಳಿಸಿದೆ. ವಿಧಾನಸಭೆಯಲ್ಲಿ ಅಂಗೀಕಾರಗೊಂಡ ವಿಧೇಯಕ ನಾಳೆ ಪರಿಷತ್ ನಲ್ಲಿ ಮಂಡನೆಯಾಗುತ್ತಾ ಅನ್ನೋದೇ ಎಲ್ಲರ ಕುತೂಹಲ.

ಸರ್ಕಾರ ಬಿಲ್ ಮಂಡಿಸುವುದು ಡೌಟ್: ನಾಳಿನ ಕಾರ್ಯ ಕಲಾಪ ಪಟ್ಟಿಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕವನ್ನು ಸೇರ್ಪಡೆಗೊಳಿಸಲಾಗಿದೆ. ಆದರೆ, ಸರ್ಕಾರ ವಿಧೇಯಕವನ್ನು ಸದನದಲ್ಲಿ ಮಂಡಿಸುವುದು ಅನುಮಾನವಾಗಿದೆ.

ಮೇಲ್ಮನೆಯಲ್ಲಿ ಸಂಖ್ಯಾಬಲದ ಕೊರತೆ ಎದುರಿಸುತ್ತಿರುವ ಸರ್ಕಾರಕ್ಕೆ ವಿಧೇಯಕ ಅಂಗೀಕಾರಕ್ಕಾಗಿ ಜೆಡಿಎಸ್ ಬೆಂಬಲ ಅಗತ್ಯವಾಗಿದೆ. ಜೆಡಿಎಸ್ ಸದಸ್ಯರು ಯಾರ ಪರ ವಾಲುತ್ತಾರೆ ಅನ್ನೋದೇ ಇನ್ನೂ ನಿಗೂಢವಾಗಿದೆ. ಇಂಥ ಅನಿಶ್ಚಿತತೆಯಲ್ಲಿ ಒಂದು ವೇಳೆ ವಿಧೇಯಕವನ್ನು ಮಂಡಿಸಿದರೆ, ಬಿದ್ದು ಹೋಗುವ ಆತಂಕ ಸರ್ಕಾರದ್ದು.

ಕಾರ್ಯ ಕಲಾಪ ಪಟ್ಟಿ
ಅದರ ಜೊತೆಗೆ ಒಂದು ವೇಳೆ ಸಭಾಪತಿ ವಿಧೇಯಕವನ್ನು ಜಂಟಿ‌ ಸದನ‌ ಸಮಿತಿಗೆ ಶಿಫಾರಸು ಮಾಡುವ ಭೀತಿ ಸರ್ಕಾರಕ್ಕೆ ಕಾಡುತ್ತಿದೆ. ಹೀಗಾಗಿ ವಿಧೇಯಕವನ್ನು ಮಂಡಿಸುವ ಉಸಾಬರಿಗೇ ಹೋಗುವುದಿಲ್ಲ ಎನ್ನಲಾಗಿದೆ. ಅದರ ಬದಲು ಸುಗ್ರೀವಾಜ್ಞೆ ಮೂಲಕ ಕಾಯ್ದೆ ತರುವ ಯೋಚನೆ ಸರ್ಕಾರದ್ದಾಗಿದೆ.
ಅಜೆಂಡಾದಲ್ಲಿ ಅವಿಶ್ವಾಸ ನಿರ್ಣಯ ಮಿಸ್:ಪರಿಷತ್ ಕಾರ್ಯಕಲಾಪ ಪಟ್ಟಿಯಲ್ಲಿ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಪ್ರಸ್ತಾಪವನ್ನು ಸೇರಿಸಿಲ್ಲ. ಇದು ನಾಳೆ ಬಿಜೆಪಿ ಸದಸ್ಯರು ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯೆ ವಾಕ್ಸಮರ, ಗದ್ದಲಕ್ಕೆ ಕಾರಣವಾಗಲಿದೆ.
ಕಾರ್ಯ ಕಲಾಪ ಪಟ್ಟಿ
ಸಭಾಪತಿಯವರನ್ನು ಕೆಳಗಿಳಿಸುವ ಉದ್ದೇಶದಿಂದ ಕರೆದಿರುವ ವಿಶೇಷ ಪರಿಷತ್ ಕಲಾಪದಲ್ಲಿ ಅಜೆಂಡಾದಲ್ಲಿ ಅವಿಶ್ವಾಸ ನಿರ್ಣಯ ಸೇರಿಸದೇ ಇರುವ ಮೂಲಕ ಪ್ರತಿಪಕ್ಷ ಪ್ರತಿತಂತ್ರ ರೂಪಿಸಿದೆ. ಪ್ರತಿಪಕ್ಷದ ಈ ಪ್ರತಿತಂತ್ರಕ್ಕೆ ಆಡಳಿತಾರೂಢ ಬಿಜೆಪಿ ಯಾವ ರೀತಿ ಕಾರ್ಯತಂತ್ರ ಹೆಣೆಯುತ್ತೆ ಎಂಬುದೇ ಎಲ್ಲರ ಕುತೂಹಲವಾಗಿದೆ.

ಓದಿ:ನಾಳೆ ವಿಶೇಷ ಪರಿಷತ್ ಕಲಾಪ: ಅವಿಶ್ವಾಸ ನಿರ್ಣಯ, ಗೋಹತ್ಯೆ ನಿಷೇಧ ವಿಧೇಯಕ ಮಂಡನೆಯಾಗುತ್ತಾ!?

ಮೊದಲಿಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು. ಅದಾದ ಬಳಿಕ ನಿಯಮ 68ರ ಮೇರೆಗೆ ಸಾರ್ವಜನಿಕ ಮಹತ್ವದ ವಿಷಯದ ಮೇಲೆ ಮುಂದುವರಿದ ಚರ್ಚೆ ನಡೆಯಲಿದ್ದು, ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಎಂ.ನಾರಾಯಣಸ್ವಾಮಿ, ಅಲ್ಲಂ ವೀರಭದ್ರಪ್ಪ, ಆರ್.ಬಿ.ತಿಮ್ಮಾಪುರ ಅವರು ರಾಜ್ಯದಲ್ಲಿ ಇತ್ತೀಚಿಗೆ ಸಂಭವಿಸಿದ ಅತಿವೃಷ್ಟಿಯಿಂದ ಸಂಬಂಧ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಪ್ರಶ್ನೋತ್ತರ‌ ಅವಧಿ

ಗಮನ ಸೆಳೆಯುವ ಸೂಚನೆ:ಮರಿತಿಬ್ಬೇಗೌಡರು ಕೋವಿಡ್ -19 ಹಿನ್ನೆಲೆಯಲ್ಲಿ ಆರ್ಥಿಕ ಮುಗ್ಗಟ್ಟಿನಿಂದಾಗಿ ಅನುದಾನ ರಹಿತ ಶಾಲಾ ಕಾಲೇಜುಗಳು, ಪಾಲಿಟೆಕ್ನಿಕ್ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ವೇತನ ಪಾವತಿಸದೇ ಇರುವುದರಿಂದ ಉಂಟಾಗಿರುವ ಗಂಭೀರ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯಲಿದ್ದಾರೆ.

ಎಸ್. ವೀಣಾ ಅಚ್ಚಯ್ಯ ಅವರು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು, ಇಲ್ಲಿನ ನಿರ್ದೇಶಕರನ್ನು ಪ್ರತಿ ನಿಯೋಜನೆ ನಿಯಮಾವಳಿಗೆ ವಿರುದ್ಧವಾಗಿ ಕಳೆದ 4 ವರ್ಷಗಳಿಂದ ಮುಂದುವರಿಸಿಕೊಂಡು ಬಂದಿರುವುದರಿಂದ ಸಂಸ್ಥೆಯ ಗುಣಮಟ್ಟ ಕುಂಠಿತವಾಗಿರುವ ಕುರಿತು ಸಮಾಜ ಕಲ್ಯಾಣ ಸಚಿವರ ಗಮನ ಸೆಳೆಯಲಿದ್ದಾರೆ.

ನಿಯಮ 330 ಮೇರೆಗೆ ಕೆ.ಟಿ. ಶ್ರೀಕಂಠೇಗೌಡ ಮತ್ತು ಮರಿತಿಬ್ಬೇಗೌಡ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ನಿವೃತ್ತಿ ರಾಜೀನಾಮೆ/ಇನ್ನಿತರ ಕಾರಣಗಳಿಂದ ತೆರವಾಗಿರುವ ಬೋಧಕ ಹುದ್ದೆಗಳ ಭರ್ತಿ ಹಾಗೂ 1986ರಿಂದ 1995ನೇ ಸಾಲಿನವರೆಗೆ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ ಪ್ರಸ್ತಾವನೆಗಳಿಗೆ ಆರ್ಥಿಕ ಇಲಾಖೆಯು ಕೋವಿಡ್-19ರ ಹಿನ್ನೆಲೆ ಅನುಮೋದನೆ ನೀಡಲು ಸಾಧ್ಯವಿಲ್ಲ ಎಂದು ಆದೇಶಿಸಿರುವ ಕುರಿತು ಪ್ರಸ್ತಾಪವಾಗಲಿದೆ.

ನಿಯಮ 330 ಮೇರೆಗೆ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ ಅವರು ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ಕುರಿತು ಪ್ರಸ್ತಾಪ ಮಾಡಲಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹೊಸ ಶಿಕ್ಷಣ ನೀತಿ ಬಗ್ಗೆ ದಿನಾಂಕ: 07.12.2020ರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:07 (60+62)ಕ್ಕೆ ನೀಡಿದ ಉತ್ತರದಿಂದಾಗಿ ಉದ್ಭವಿಸಿದ ವಿಷಯದ ಕುರಿತು ಬಿ. ಕೆ. ಹರಿಪ್ರಸಾದ್ ಅವರಿಂದ ಅರ್ಧ ಗಂಟೆ ಕಾಲಾವಧಿ ಚರ್ಚೆ ನಡೆಸಲಿದ್ದಾರೆ.

ABOUT THE AUTHOR

...view details