ಕರ್ನಾಟಕ

karnataka

ETV Bharat / state

ಕ್ಷೌರಿಕ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ)ಗೆ ಸೇರಿಸಿ.. ಕ್ಷೌರಿಕ ಮೀಸಲಾತಿ ಒಕ್ಕೂಟ ಮನವಿ - Add the barber community to the Scheduled Tribe (ST)

ರಾಜ್ಯದಲ್ಲಿ ಜಾತಿಯ ಬೆಂಬಲ ಇಲ್ಲದೆ ರಾಜಕೀಯವಾಗಿ ಹಾಗೂ ಸಮಾಜಿಕವಾಗಿ ಯಾವುದೇ ಮಹತ್ವವನ್ನು ಕ್ಷೌರಿಕ ಸಮಾಜಕ್ಕೆ ನೀಡಲಾಗುತ್ತಿಲ್ಲ. ಈ ಹಿನ್ನೆಲೆ ಹೂವಿನ ಜೊತೆ ನಾರನ್ನೂ ಸ್ವರ್ಗಕ್ಕೆ ಸೇರಿಸಿ ಎನ್ನುವ ಗಾದೆಯಂತೆ ನಿಮ್ಮ ಹೋರಾಟದ ಜೊತೆಯಲ್ಲೇ ನಮ್ಮನ್ನೂ ಸೇರ್ಪಡೆ ಮಾಡಿಕೊಂಡು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಮನವಿ..

ಕ್ಷೌರಿಕ ಮೀಸಲಾತಿ ಒಕ್ಕೂಟ
ಕ್ಷೌರಿಕ ಮೀಸಲಾತಿ ಒಕ್ಕೂಟ

By

Published : Sep 30, 2020, 9:18 PM IST

ಬೆಂಗಳೂರು :ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟದಲ್ಲಿ ಕ್ಷೌರಿಕರನ್ನೂ ಸೇರಿಸಿಕೊಳ್ಳಿ ಎಂದು ಕ್ಷೌರಿಕ ಮೀಸಲಾತಿ ಒಕ್ಕೂಟದ ರಾಜ್ಯಾಧ್ಯಕ್ಷ ಎಂ ಬಿ ಶಿವಕುಮಾರ್‌ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಅಪಾರ ಬೆಂಬಲ ಹೊಂದಿರುವ ಕುರುಬ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಸಚಿವರಾದ ಈಶ್ವರಪ್ಪ ಮತ್ತು ಕಾಗಿನೆಲೆ ಗುರು ಪೀಠದ ಸ್ವಾಮೀಜಿಗಳ ನೇತೃತ್ವದಲ್ಲಿ ತೀರ್ಮಾನಿಸಲಾಗಿದೆ. ಇದಕ್ಕೆ ಮಾಜಿ ಮಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕೂಡ ಬೆಂಬಲಿಸಿದ್ದಾರೆ. ಪಕ್ಷಾತೀತವಾಗಿ ಈ ರೀತಿ ಹೋರಾಟಕ್ಕೆ ಮುಂದಾಗಿರುವುದು ಸ್ವಾಗತಾರ್ಹ ವಿಷಯ.

ಇದೇ ವೇಳೆ ಹಿಂದುಳಿದ ವರ್ಗದಲ್ಲಿ ಅಪಮಾನಕ್ಕೆ, ಜಾತಿನಿಂದನೆಗೆ, ಅಪಹಾಸ್ಯಕ್ಕೆ ಗುರಿಯಾಗಿರುವ ಕ್ಷೌರಿಕ ಸಮಾಜಕ್ಕೆ ಧ್ವನಿ ಇಲ್ಲದೆ, ಜಾತಿಯ ಶಕ್ತಿ ಇಲ್ಲದೆ, ಶಕ್ತಿಹೀನವಾದ ನಿರ್ಗತಿಕ ಕ್ಷೌರಿಕ ಸಮಾಜ ಸ್ವಾತಂತ್ರ್ಯ ಬಂದು 73 ವರ್ಷ ಕಳೆದ್ರೂ ಕೂಡ ಈಗಲೂ ಹಳ್ಳೀಗಾಡಿನಲ್ಲಿ ದಲಿತರಿಗೆ ಮುಕ್ತ ಕ್ಷೌರ ಸೇವೆ ಮಾಡಲಿಕ್ಕೆ ಆಗುತ್ತಿಲ್ಲ ಅಂದರೆ ಸರ್ಕಾರದಿಂದ ಸೌಲಭ್ಯ ತಗೆದುಕೊಳ್ಳೊದಕ್ಕೆ ಆಗುತ್ತಾ? ಈ ದೇಶದಲ್ಲೇ ತಿರಸ್ಕರಿಸಲ್ಪಟ್ಟ ಸಮಾಜ ಅಂದರೆ ಕ್ಷೌರಿಕ ಸಮಾಜ.

ಆದ್ದರಿಂದ ನಮ್ಮ ಈ ಸಮಾಜವನ್ನು ತಮ್ಮ ಹೋರಾಟದ ಜೊತೆ ಸೇರಿಸಿಕೊಂಡು ನಮನ್ನು ಕೂಡ ಎಸ್​ಟಿಗೆ ಸೇರಿಸಬೇಕು ಎಂದು ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಮಾಜಿ ಮಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸಚಿವ ಈಶ್ವರಪ್ಪ ಮತ್ತು ಕುರುಬ ಸಮುದಾಯದ ಮಾಜಿ ಮಂತ್ರಿಗಳ ಶಾಸಕರು ಹಾಗೂ ಕುರುಬ ಸಮುದಾಯದ ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಜಾತಿಯ ಬೆಂಬಲ ಇಲ್ಲದೆ ರಾಜಕೀಯವಾಗಿ ಹಾಗೂ ಸಮಾಜಿಕವಾಗಿ ಯಾವುದೇ ಮಹತ್ವವನ್ನು ಕ್ಷೌರಿಕ ಸಮಾಜಕ್ಕೆ ನೀಡಲಾಗುತ್ತಿಲ್ಲ. ಈ ಹಿನ್ನೆಲೆ ಹೂವಿನ ಜೊತೆ ನಾರನ್ನೂ ಸ್ವರ್ಗಕ್ಕೆ ಸೇರಿಸಿ ಎನ್ನುವ ಗಾದೆಯಂತೆ ನಿಮ್ಮ ಹೋರಾಟದ ಜೊತೆಯಲ್ಲೇ ನಮ್ಮನ್ನೂ ಸೇರ್ಪಡೆ ಮಾಡಿಕೊಂಡು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details