ಬೆಂಗಳೂರು: ವಿವಿಧ ವರ್ಗಗಳಿಗೆ ಘೋಷಣೆ ಮಾಡಿರುವ 1610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನಲ್ಲಿಇನ್ನೂ ಕೆಲ ವರ್ಗಕ್ಕೆ ಅವಕಾಶ ಸಿಕ್ಕಿಲ್ಲ, ಹೀಗಾಗಿ ಅಂತಹ ವರ್ಗಗಳನ್ನೂ ಗಮನಿಸಬೇಕು ಹಾಗೂ ಆ ವರ್ಗಕ್ಕೂ ನೆರವು ಘೋಷಿಸುವಂತೆ ಬಿಜೆಪಿ ಶಾಸಕರ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಶಾಸಕರಾದ ಶಿವರಾಜ್ ಪಾಟೀಲ್, ರಾಜುಗೌಡ ಪ್ರತಾಪ್ ಗೌಡ ಪಾಟೀಲ್, ಎಂಎಲ್ ಸಿ ರವಿಕಮಾರ್ ಅವರಿದ್ದ ಬಿಜೆಪಿ ನಿಯೋಗ ಭೇಟಿ ನೀಡಿತು. ವಿಶೇಷ ಪ್ಯಾಕೇಜ್ ನಲ್ಲಿ ಬಿಟ್ಟು ಹೋದ ಕೆಲ ವರ್ಗಕ್ಕೂ ಅವಕಾಶ ಕಲ್ಪಿಸುವ ಸಂಬಂಧ ಸಮಾಲೋಚನೆ ನಡೆಸಿತು.