ಕರ್ನಾಟಕ

karnataka

ETV Bharat / state

ಅದಮ್ಯ ಚೇತನ ಸಂಸ್ಥೆ ಪುನಃ ಕಾರ್ಯಾರಂಭ: ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್

ಲಾಕ್​ಡೌನ್​ ಘೋಷಣೆ ಹಿನ್ನೆಲೆ ಅನೇಕ ಕಡೆ ಕೂಲಿಕಾರ್ಮಿಕರು, ನಿರ್ಗತಿಕರು ಹಾಗೂ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿ, ಸ್ಥಗಿತ ಗೊಂಡಿದ್ದ ಅದಮ್ಯ ಚೇತನ ಅಡುಗೆ ಮನೆ ಮತ್ತೆ ಸೋಮವಾರದಿಂದ ತನ್ನ ಕಾರ್ಯ ಪ್ರಾರಂಭಿಸಲಿದೆ ಎಂದು ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ತಿಳಿಸಿದ್ದಾರೆ.

Adamaya Chetana Institute re-started
ಅದಮ್ಯ ಚೇತನ ಸಂಸ್ಥೆ ಪುನಃ ಕಾರ್ಯಾರಂಭ

By

Published : Mar 29, 2020, 4:31 PM IST

ಬೆಂಗಳೂರು: ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಪೌಷ್ಟಿಕಾಂಶ ಭರಿತ ಬಿಸಿಯೂಟ ನೀಡುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದ ಅದಮ್ಯ ಚೇತನ ಇತ್ತೀಚೆಗೆ ತನ್ನಪ್ರಾಕೃತಿಕ ಅಡುಗೆ ಮನೆಯನ್ನು ಬಂದ್ ಮಾಡಿತ್ತು. ಲಾಕ್ ಡೌನ್ ಎಫೆಕ್ಟ್ ನೇರವಾಗಿ, ದಿನಗೂಲಿ ನೌಕರರಿಗೆ, ಆಶಕ್ತರಿಗೆ ತಟ್ಟುತ್ತಿರುವುದರಿಂದ ಸ್ಥಗಿತಗೊಂಡಿದ್ದ ಅದಮ್ಯ ಚೇತನ ಅಡುಗೆ ಮನೆ ಮತ್ತೆ ಸೋಮವಾರದಿಂದ ತನ್ನ ಕಾರ್ಯ ಪ್ರಾರಂಭಿಸಲಿದೆ.‌

ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್

ಕೊರೊನಾ ಹರಡದಂತೆ ತಡೆಯಲು ದೇಶಾದ್ಯಂತ ಲಾಕ್​ಡೌನ್​ ಘೋಷಣೆ ಹಿನ್ನೆಲೆ ಅನೇಕ ಕಡೆ ಕೂಲಿಕಾರ್ಮಿಕರು, ನಿರ್ಗತಿಕರು ಹಾಗೂ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿ ಪುನಃ ಅದನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ತಿಳಿಸಿದ್ದಾರೆ. ನಾಳೆಯಿಂದ ಕಾರ್ಮಿಕ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಸಾವಿರಾರು ಜನರ ಮನೆ ಮನೆಗೆ ಊಟ ತಲುಪಿಸುವ ಕಾರ್ಯ ಮಾಡಲಿದ್ದು, ಈಸಿ ಟು ಕುಕ್ ಉಪ್ಪಿಟ್ಟು ಮತ್ತು ಕಿಚಡಿ ಮಿಕ್ಸ್ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ದಿನಗೂಲಿ ನೌಕರರು, ಅಶಕ್ತರು ಹಾಗೂ ವಯಸ್ಸಾದವರ ಜೊತೆಯಲ್ಲಿಯೇ ಅಗತ್ಯವಿರುವ ಕುಟುಂಬಗಳಿಗೆ ಉಪ್ಪಿಟ್ಟು ಹಾಗೂ ಕಿಚಡಿಯನ್ನು ಪೊಟ್ಟಣಗಳನ್ನು ಮಾಡಿ ವಿತರಿಸಲಾಗುವುದು. ಈ ಮಹತ್ಕಾರ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೂಡ ಕೈ ಜೋಡಿಸಿದ್ದು, ಅಗತ್ಯ ವಸ್ತುಗಳನ್ನು ಕೂಡ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.

ಅದಮ್ಯ ಚೇತನ ಸಂಸ್ಥೆ ಪುನಃ ಕಾರ್ಯಾರಂಭ: ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್


ಈಸಿ ಟು ಕುಕ್- ಉಪ್ಪಿಟ್ಟು ಹಾಗೂ ಕಿಚಡಿ ಮಿಕ್ಸ್: ಈ ಮಿಕ್ಸ್ ಪ್ಯಾಕೆಟ್​ನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಅಡುಗೆ ತಯಾರಿಸಿ ಕೊಳ್ಳ ಬಹುದಾಗಿದೆ. ಈ ಮಿಕ್ಸ್ ಎಣ್ಣೆ, ರವೆ, ದಾಲ್ ಸೇರಿದಂತೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳು ಒಳಗೊಂಡಿರುತ್ತವೆ. ಅಗತ್ಯವಿರುವವರು ಸುಲಭವಾಗಿ ಆಹಾರ ತಯಾರಿಸಿಕೊಳ್ಳಬಹುದು. ಹಾಗೆ ಅದಮ್ಯ ಚೇತನ ಸಂಸ್ಥೆಯ ಎಲ್ಲಾ ನೌಕರರಿಗೂ ಗೌರವಧನದಲ್ಲಿ ಯಾವುದೇ ಕಡಿತವನ್ನು ಮಾಡದೆ, ಪೂರ್ತಿ ಗೌರವಧ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಉಚಿತ ಊಟದ ವ್ಯವಸ್ಥೆಯನ್ನು ಕೈಗೊಳ್ಳುವ ಕಾರ್ಯದಲ್ಲಿ ಅಗತ್ಯವಿರುವ ಹಣ ಸಹಾಯವನ್ನು ಮಾಡುವ ಮೂಲಕ ಸಾರ್ವಜನಿಕರು ಕೈಜೋಡಿಸಬಹುದಾಗಿದೆ ಎಂದು ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮನವಿ ಮಾಡಿದ್ದಾರೆ.

ABOUT THE AUTHOR

...view details