ಕರ್ನಾಟಕ

karnataka

ETV Bharat / state

ಗಂಡನಿಗೆ ಅನುಮಾನದ ಗುಮ್ಮ.. ಬೆಂಗಳೂರಲ್ಲಿ ಪತ್ನಿ ಮೇಲೆ ಬಿಸಿ ಎಣ್ಣೆ ಸುರಿದಿದ್ದ ಆರೋಪಿ ಅರೆಸ್ಟ್ - ಬೆಂಗಳೂರಿನಲ್ಲಿ ಹೆಂಡತಿಗೆ ಬಿಸಿ ಎಣ್ಣೆ ಸುರಿದಿದ್ದ ಗಂಡ ಅರೆಸ್ಟ್

ಬಿಸಿ ಎಣ್ಣೆಯನ್ನು ಹೆಂಡ್ತಿಯ ಮುಖ, ಎದೆ ಹಾಗೂ ಕೈ-ಕಾಲುಗಳ ಮೇಲೆ ಸುರಿದಿದ್ದಾನೆ. ಅಪ್ಪನ ಹೀನ ಕೃತ್ಯ ನೋಡಿ ತಡೆಯಲು ಬಂದ ಮಗಳ ಮೇಲೆಯೂ ಎಣ್ಣೆ ಎರಚಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು‌ ಆತನನ್ನು ಜೈಲಿಗಟ್ಟಿದ್ದಾರೆ.

ಬೆಂಗಳೂರಲ್ಲಿ ಪತ್ನಿ ಮೇಲೆ ಬಿಸಿ ಎಣ್ಣೆ ಸುರಿದಿದ್ದ ಆರೋಪಿ ಅರೆಸ್ಟ್
ಬೆಂಗಳೂರಲ್ಲಿ ಪತ್ನಿ ಮೇಲೆ ಬಿಸಿ ಎಣ್ಣೆ ಸುರಿದಿದ್ದ ಆರೋಪಿ ಅರೆಸ್ಟ್

By

Published : Feb 3, 2022, 2:51 PM IST

Updated : Feb 3, 2022, 3:45 PM IST

ಬೆಂಗಳೂರು: ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿದ ಗಂಡ ತನ್ನ ಹೆಂಡ್ತಿಗೆ ಬುದ್ಧಿ ಕಲಿಸುವುದಕ್ಕಾಗಿ ಕುದಿಯುವ ಅಡುಗೆ ಎಣ್ಣೆ‌ ಸುರಿದು ವಿಕೃತಿ ಮೆರೆದಿದ್ದ ಘಟನೆ ನಗರದಲ್ಲಿ ನಡೆದಿದೆ. ಆರೋಪಿಯನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಆಡುಗೋಡಿಯ ಎಲ್.ಆರ್ ನಗರದ ನಿವಾಸಿಯಾಗಿರುವ ಥಾಮಸ್ ಬಂಧಿತ.

ಈತನ ಹುಚ್ಚಾಟಕ್ಕೆ ಹೆಂಡತಿ ಅಂಥೋಣಿಯಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಪತ್ನಿ ಮೇಲೆ‌ ಎಣ್ಣೆ ಎರಚುವಾಗ ತಡೆಯಲು ಬಂದ 13 ವರ್ಷದ ಮಗಳ ಮೇಲೆಯೂ ಎಣ್ಣೆ ಸುರಿದಿದ್ದಾನೆ.

ಮದ್ಯ ವ್ಯಸನಿಯಾಗಿರುವ ಥಾಮಸ್ ಎಲ್.ಆರ್‌ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ. ತನ್ನ ಪತ್ನಿಯೂ ಪರಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಶಂಕೆ ವ್ಯಕ್ತಪಡಿಸಿ ಆಗಾಗ್ಗೆ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ. ಕಳೆದ ಜನವರಿ 30ರಂದು ಥಾಮಸ್ ಹೆಂಡ್ತಿ ಮೇಲೆ ಕೋಲಿನಿಂದ ಹೊಡೆದು ಚಿತ್ರಹಿಂಸೆ ನೀಡಿ ಪ್ರಜ್ಞೆ ತಪ್ಪಿಸಿದ್ದ. ನಂತರ ಸ್ನಾನ ಮಾಡಲು ನೀರು ಕಾಯಿಸುವುದಾಗಿ ಹೇಳಿ ಅಡುಗೆ ಮನೆಗೆ ಹೋಗಿದ್ದಾನೆ‌. ಅಲ್ಲೇ‌ ಇದ್ದ ಎಣ್ಣೆಯನ್ನು ಕುದಿಸಿದ್ದಾನೆ‌.

ಬಳಿಕ ಬಿಸಿ ಎಣ್ಣೆಯನ್ನು ಹೆಂಡ್ತಿಯ ಮುಖ, ಎದೆ ಹಾಗೂ ಕೈ-ಕಾಲುಗಳ ಮೇಲೆ ಸುರಿದಿದ್ದಾನೆ. ಅಪ್ಪನ ಹೀನ ಕೃತ್ಯ ನೋಡಿ ತಡೆಯಲು ಬಂದ ಮಗಳ ಮೇಲೆಯೂ ಎಣ್ಣೆ ಎರಚಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು‌ ಆತನನ್ನು ಜೈಲಿಗಟ್ಟಿದ್ದಾರೆ.

ಓದಿ:ರಾಯಚೂರು: ಹಟ್ಟಿ ಚಿನ್ನದ ಕಂಪನಿ ಎದುರು ಕಾರ್ಮಿಕರ ಪ್ರತಿಭಟನೆ!

Last Updated : Feb 3, 2022, 3:45 PM IST

For All Latest Updates

TAGGED:

ABOUT THE AUTHOR

...view details