ಕರ್ನಾಟಕ

karnataka

ETV Bharat / state

ಸಿಎಂ ಬಿ.ಎಸ್​. ಯಡಿಯೂರಪ್ಪ ಭೇಟಿ ಮಾಡಿದ ನಟಿ ಶೃತಿ.. ಕಾರಣ? - ಶೃತಿ

ತನ್ನನ್ನು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ಬೆನ್ನಲ್ಲೇ ನಟಿ ಶೃತಿ ಅವರು ಸಿಎಂ ಬಿ.ಎಸ್. ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ.

ಸಿಎಂ ಬಿ.ಎಸ್​.ಯಡಿಯೂರಪ್ಪ ಭೇಟಿ ಮಾಡಿದ ನಟಿ ಶೃತಿ
ಸಿಎಂ ಬಿ.ಎಸ್​.ಯಡಿಯೂರಪ್ಪ ಭೇಟಿ ಮಾಡಿದ ನಟಿ ಶೃತಿ

By

Published : Jul 19, 2021, 11:31 AM IST

ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಕೊಕ್​ ನೀಡಿದ ಹಿನ್ನೆಲೆ, ಇಂದು ಸಿಎಂ ಬಿ. ಎಸ್​. ಯಡಿಯೂರಪ್ಪರನ್ನು ನಟಿ ಶೃತಿ ಭೇಟಿ ಮಾಡಿದ್ದಾರೆ. ಸ್ಥಾನ ಕಳೆದುಕೊಂಡ ಬೇಸರದಲ್ಲೇ ಸಿಎಂ ಭೇಟಿ ಮಾಡಿದ ನಟಿ, ಈವರೆಗೆ ಸೇವೆ ಸಲ್ಲಿಸಲು ಅವಕಾಶ ಕೊಟ್ಟಿದ್ದಕ್ಕೆ ಸಿಎಂಗೆ ಧನ್ಯವಾದ ತಿಳಿಸಿದ್ದಾರೆ.

ಕಳೆದ ರಾತ್ರಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದ ಹುದ್ದೆ ಕಳೆದುಕೊಂಡ ನಟಿ ಶೃತಿ ಇಂದು ಬೆಳ್ಳಂಬೆಳಗ್ಗೆಯೇ ಪುತ್ರಿಯೊಂದಿಗೆ ಸಿಎಂ ಸರ್ಕಾರಿ ನಿವಾಸ ಕಾವೇರಿಗೆ ಆಗಮಿಸಿದರು‌. ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿಯಾಗಿ 20 ನಿಮಿಷ ಮಾತುಕತೆ ನಡೆಸಿದರು. ನಿಗಮ ಮಂಡಳಿ ನೇಮಕಾತಿ ವಾಪಸ್​ ಪಡೆದಿರೋದರ ಬಗ್ಗೆ ಚರ್ಚಿಸಿದರು.

ಇದನ್ನೂ ಓದಿ:ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ನಟಿ ಶೃತಿಗೆ ಕೊಕ್

ABOUT THE AUTHOR

...view details