ಕರ್ನಾಟಕ

karnataka

ETV Bharat / state

ನಟಿ ಸಂಜನಾ 5 ದಿನ ಸಿಸಿಬಿ ಕಸ್ಟಡಿಗೆ: ರಾಗಿಣಿ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿಯೇ ವಾಸ್ತವ್ಯ - Actress Sanjana latest news

ರಿಮ್ಯಾಂಡ್​ ಕೋರ್ಟ್​ನ 8ನೇ ಎಸಿಎಂಎಂ ನ್ಯಾಯಾಧೀಶರು ಐದು ದಿನಗಳ ಕಾಲ ಸಂಜನಾರನ್ನ ಸಿಸಿಬಿ ಕಸ್ಟಡಿಗೆ ನೀಡಿದ್ದು, ನಟಿ ಸಂಜನಾ ಗಲ್ರಾನಿ ಸದ್ಯ ರಾಗಿಣಿ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿಯೇ ಇಂದು ರಾತ್ರಿ ಕಳೆಯಲಿದ್ದಾರೆ. ಸಿಸಿಬಿ ಕಚೇರಿ‌ ಹಾಗೂ ಮಹಿಳಾ ಸಾಂತ್ವನ ಕೇಂದ್ರದ ಸುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ನಟಿ ಸಂಜನಾ 5 ದಿನ ಸಿಸಿಬಿ ಕಸ್ಟಡಿಗೆ:
ನಟಿ ಸಂಜನಾ 5 ದಿನ ಸಿಸಿಬಿ ಕಸ್ಟಡಿಗೆ:

By

Published : Sep 8, 2020, 5:23 PM IST

ಬೆಂಗಳೂರು: ನಟಿ ಸಂಜನಾ ಗಲ್ರಾನಿಯನ್ನ ಸದ್ಯ ಸಿಸಿಬಿ ಪೊಲೀಸರು ಬಂಧಿಸಿದ್ದು, ವಸಂತ ನಗರ ಬಳಿ ಇರುವ ರಿಮ್ಯಾಂಡ್​ ಕೋರ್ಟ್​ನ 8ನೇ ಎಸಿಎಂಎಂ ನ್ಯಾಯಾಧೀಶರ ಎದುರು ಹಾಜರು ಪಡಿಸಿದರು. ಬಳಿಕ ಹೆಚ್ಚಿನ ವಿಚಾರಣೆಯ ಅಗತ್ಯತೆ ಇರುವ ಹಿನ್ನೆಲೆ 8 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಆದರೆ ನ್ಯಾಯಾಲಯ ಐದು ದಿನಗಳ ಕಾಲ ಸಂಜನಾರನ್ನ ಕಸ್ಟಡಿಗೆ ನೀಡಿದೆ.

ನಟಿ ಸಂಜನಾ 5 ದಿನ ಸಿಸಿಬಿ ಕಸ್ಟಡಿಗೆ

ನಟಿ ಸಂಜನಾ ಗಲ್ರಾನಿ ಸದ್ಯ ರಾಗಿಣಿ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿಯೇ ಇಂದು ರಾತ್ರಿ ಕಳೆಯಲಿದ್ದು, ನಾಳೆಯಿಂದ ಮತ್ತೆ ಸಿಸಿಬಿ ಪೊಲೀಸರು ವಿಚಾರಣೆ ಚುರುಕುಗೊಳಿಸಲಿದ್ದಾರೆ. ಸದ್ಯ ನಟಿಯರಾದ ಸಂಜನಾ ಹಾಗೂ ರಾಗಿಣಿ ಇಬ್ಬರು ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ಕಾರಣ ಮಹಿಳಾ ಸಾಂತ್ವನ ಕೇಂದ್ರದ ಸುತ್ತ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ನಾಳೆ ಸಿಸಿಬಿ ತನಿಖಾಧಿಕಾರಿಗಳಾದ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್ ಅವರು ನಟಿಯರ ವಿಚಾರಣೆ ನಡೆಸಲಿದ್ದಾರೆ.

ABOUT THE AUTHOR

...view details