ಬೆಂಗಳೂರು: ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ವಶಕ್ಕೆ ಪಡೆದಿದೆ. ಈ ಹಿನ್ನೆಲೆ ಸಿಸಿಬಿ ಕಚೇರಿಗೆ ಕರೆ ತಂದಿರುವ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇನ್ಸ್ಪೆಕ್ಟರ್ ಅಂಜುಮಾಲಾ ಹಾಗೂ ಪೂರ್ಣಿಮಾ, ಎಸಿಪಿ ಗೌತಮ್ ನೇತೃತ್ವದ ತಂಡ ವಿಚಾರಣೆ ನಡೆಸುತ್ತಿದ್ದು, ಸಂಜನಾ ಮನೆಯಲ್ಲಿದ್ದ ಲ್ಯಾಪ್ಟಾಪ್, ಟ್ಯಾಬ್, ವೈಯಕ್ತಿಕ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಆರೋಪ: ಸಿಸಿಬಿ ಕಚೇರಿಯಲ್ಲಿ ಸಂಜನಾ ವಿಚಾರಣೆ - Actress Sanjana Galrani
ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ವಶಕ್ಕೆ ಪಡೆದಿದೆ. ಈ ಹಿನ್ನೆಲೆ ಸಿಸಿಬಿ ಕಚೇರಿಗೆ ಕರೆ ತಂದಿರುವ ಅಧಿಕಾರಿಗಳು, ವಿಚಾರಣೆ ನಡೆಸುತ್ತಿದ್ದಾರೆ. ಇನ್ಸ್ಪೆಕ್ಟರ್ ಅಂಜುಮಾಲಾ ಹಾಗೂ ಪೂರ್ಣಿಮಾ ನೇತೃತ್ವದ ತಂಡ ವಿಚಾರಣೆ ನಡೆಸುತ್ತಿದ್ದು, ಸಂಜನಾ ಮನೆಯಲ್ಲಿದ್ದ ಲ್ಯಾಪ್ಟಾಪ್, ಟ್ಯಾಬ್, ವೈಯಕ್ತಿಕ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಆರೋಪ: ನಟಿ ಸಂಜನಾ ಸಿಸಿಬಿ ವಶಕ್ಕೆ
ಇನ್ನು ಕಚೇರಿಗೆ ಕರೆ ತಂದಿರುವ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ. ಈ ನಡುವೆ ಸಂಜನಾ ತಂದೆ ಮನೋಹರ್ ಹಾಗೂ ತಾಯಿ ರಶ್ಮಿ ಗಲ್ರಾನಿಯನ್ನೂ ಸಹ ಪೊಲೀಸರು ಕರೆತಂದಿದ್ದಾರೆ. ಇನ್ನು ಮನೆ ಮೇಲಿನ ದಾಳಿ ವೇಳೆ ಎರಡು ಬ್ಯಾಗ್, ಒಂದು ಬಾಕ್ಸ್ ವಶಕ್ಕೆ ಪಡೆದಿದ್ದು, ಸಿಸಿಬಿ ಕಚೇರಿಗೆ ತೆಗೆದುಜಕೊಂಡು ಬಂದಿದ್ದಾರೆ.
ಇದನ್ನೂ ಓದಿ: ನಟಿಯನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು..ಸೈಲೆಂಟಾಗಿ ಜೀಪ್ ಹತ್ತಿ ಕುಳಿತ ಸಂಜನಾ
Last Updated : Sep 8, 2020, 1:05 PM IST