ಬೆಂಗಳೂರು: ಕೊರೊನಾ ಇರುವ ಕಾರಣ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳನ್ನು ಭೇಟಿಯಾಗಲು ಕುಟುಂಬಸ್ಥರಿಗೆ ಅವಕಾಶವಿಲ್ಲ. ಹೀಗಾಗಿ ಸಂಜನಾ ಗಲ್ರಾನಿ ತನ್ನ ಸ್ಥಿತಿ ನೆನೆದು ಕಣ್ಣೀರು ಹಾಕಿದ್ದಾರೆ. ನಿನ್ನೆ ರಾತ್ರಿಯಿಂದ ಇಲ್ಲಿಯವರೆಗೆ ಮೂರು ನಾಲ್ಕು ಬಾರಿ ಜೋರಾಗಿ ಕಿರುಚುತ್ತಾ ಸಂಜನಾ ಗೋಳಾಟ ಮಾಡಿದ್ದಾರೆ. ಎಂಬ ಮಾಹಿತಿ ದೊರೆತಿದೆ. ಇಂದು ನಟಿ ಸಂಜನಾಗೆ 31ನೇ ವರ್ಷದ ಹುಟ್ಟುಹಬ್ಬವಾಗಿದ್ದು, ಪ್ರತಿವರ್ಷ ಐಷಾರಾಮಿ ಹೋಟೆಲ್ನಲ್ಲಿ ಬರ್ತ್ ಡೇ ಆಚರಿಸಿಕೊಳ್ತಿದ್ದು, ಈ ಬಾರಿ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ.
ಕಳೆದ ಒಂದು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿಗೆ ಪೋಷಕರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಹೀಗಾಗಿ ತಾಯಿ ರೇಷ್ಮಾ, ಗಲ್ರಾನಿಗೆ ಕರೆ ಮಾಡಿ ಕಣ್ಣೀರು ಹಾಕಿದ್ದಾರೆ.