ಬೆಂಗಳೂರು :ಪವರ್ ಸ್ಟಾರ್ ಪುನೀತ್ ರಾಕ್ಕುಮಾರ್ ನಿಧನ ಹಿನ್ನೆಲೆ ಅಂತಿಮ ದರ್ಶನ ಪಡೆಯಲು ಕನ್ನಡದ ಮೋಹಕ ತಾರೆ ರಮ್ಯಾ ಬೆಂಗಳೂರಿಗೆ ಆಗಮಿಸಿದ್ದಾರೆ.
ಬೆಂಗಳೂರಿಗೆ ಆಗಮಿಸಿದ ಮೋಹಕ ತಾರೆ ರಮ್ಯಾ.. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿನಿಮಾರಂಗದಲ್ಲಿ ಪುನೀತ್ ರಾಜ್ಕುಮಾರ್ ನನಗೆ ಅತ್ಯಂತ ಆಪ್ತ ಸ್ನೇಹಿತ. ಅವರು ನನಗೆ ಕೋ ಸ್ಟಾರ್ಗಿಂತ ಒಬ್ಬ ಒಳ್ಳೆಯ ಸ್ನೇಹಿತ. ತುಂಬಾ ಬೇಸರವಾಗುತ್ತಿದೆ.
ಅವರೊಂದಿಗೆ ಕಳೆದ ನೆನಪುಗಳು ಶಾಶ್ವತ. ಕಳೆದ ಮೂರು ವಾರಗಳ ಹಿಂದೆ ಅವರರೊಂದಿಗೆ ಮಾತನಾಡಿದ್ದೆ. ಇಂದು ಅವರು ನಮ್ಮೊಂದಿಗೆ ಇಲ್ಲ ಎಂಬುವುದನ್ನು ನಂಬಲಾಗುತ್ತಿಲ್ಲ ಎಂದರು.
ಸದ್ಯ ನಟಿ ರಮ್ಯಾ ಸಿನಿರಂಗದಿಂದ ದೂರಾಗಿ ತುಂಬಾ ಸಮಯವಾಗಿದೆ. ಪುನೀತ್ ರಾಜ್ಕುಮಾರ್ ಅವರು ಹೀರೋ ಆದ ಬಳಿಕ ಆರಂಭದ ದಿನಗಳಲ್ಲಿ ರಮ್ಯಾ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರಿಗೆ ಜೋಡಿ ಆಗಿದ್ದರು. ಅಭಿ, ಅರಸು ಮತ್ತು ಆಕಾಶ್ ಚಿತ್ರಗಳಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದರು.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು, ಆಪ್ತರು ಆಗಮಿಸಿ ಪುನೀತ್ಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ:ನಾಳೆ ಪುನೀತ್ ಅಂತ್ಯಕ್ರಿಯೆ.. ಬೆಳಗಿನವರೆಗೂ ಅಂತಿಮ ದರ್ಶನಕ್ಕೆ ಅವಕಾಶ- ಸಿಎಂ ಬೊಮ್ಮಾಯಿ