ಬೆಂಗಳೂರು: ಸ್ಯಾಂಡಲ್ ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ರಾಗಿಣಿ ಆಪ್ತ ರವಿಶಂಕರ್ಗೆ ಮತ್ತೊಂದು ಸುತ್ತು ಡ್ರಿಲ್ ಶುರುಮಾಡಿದ್ದಾರೆ.
ಪ್ರಕರಣದಲ್ಲಿ ಮೊದಲು ಸಿಸಿಬಿ ಕೈಗೆ ಸಿಕ್ಕಿಬಿದ್ದ ಆರೋಪಿ ರವಿಶಂಕರ್ನನ್ನು ನಿನ್ನೆ ಮತ್ತೆ ಕಸ್ಟಡಿಗೆ ಪಡೆದುಕೊಂಡಿದ್ದು, ಮತ್ತೊಂದು ಸುತ್ತಿನ ವಿಚಾರಣೆ ನಡೆಸಲಿದೆ. ಸದ್ಯ ಪ್ರಕರಣದಲ್ಲಿ ಎ6 ಆರೋಪಿ ಆದಿತ್ಯ ಆಳ್ವ ತಲೆಮರೆಸಿಕೊಂಡಿದ್ದು, ಈತನ ಮಾಹಿತಿ ಮತ್ತು ನೈಜೀರಿಯನ್ ಡ್ರಗ್ಸ್ ಪೆಡ್ಲರ್ಗಳೊಂದಿಗೆ ಇರುವ ಸಂಪರ್ಕದ ಕುರಿತಾಗಿ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕ್ತಿದ್ದಾರೆ.