ಕರ್ನಾಟಕ

karnataka

ETV Bharat / state

ತನ್ನ ಕಾರು ಡ್ರೈವರ್​ಗೆ ಸಂಚಾರಿ ವಿಜಯ್ ಮಾಡಿದ ಸಹಾಯವೇನು ಗೊತ್ತಾ? - Actor Vijay Car driving Devaraj

ಲಾಕ್​​ ಡೌನ್ ಸಂದರ್ಭದಲ್ಲಿ, ತನ್ನ ಕಾರನ್ನು ಸೇಲ್ ಮಾಡಿ ಬಡವರಿಗೆ ಸಹಾಯ ಮಾಡಿದ್ದ ನಟ ಸಂಚಾರಿ ವಿಜಯ್​, ಕೆಲಸ ಕಳೆದುಕೊಂಡ ಡ್ರೈವರ್​ ದೇವರಾಜುಗೆ ನೆರವಿನ ಹಸ್ತ ಚಾಚಿದ್ದರು. ದೇವರಾಜುಗೆ ಹೊಸ ಬೈಕ್​ವೊಂದನ್ನು ಕೊಡಿಸಿ, ತಾವು ಬಳಸುತ್ತಿದ್ದ ಐಫೋನ್​ ಅನ್ನು ಸಹ ಉಡುಗೊರೆಯಾಗಿ ನೀಡಿದ್ದರು.

Actor Vijay
ಸಂಚಾರಿ ವಿಜಯ್

By

Published : Jun 17, 2021, 5:50 PM IST

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಈಗ ನೆನಪುಗಳನ್ನು ಬಿಟ್ಟೋಗಿದ್ದಾರೆ. ಬದುಕಿರುವಷ್ಟು ದಿನ ಬೇರೆಯವರ ಕಷ್ಟಕ್ಕೆ‌ ಮಿಡಿಯುತ್ತಿದ್ದ ವಿಜಯ್, ಬದುಕಿನ ಬಂಡಿಯ ಸಂಚಾರವನ್ನು ಅರ್ಧಕ್ಕೆ ನಿಲ್ಲಿಸಿ ಮೂರು ದಿನಗಳು ಕಳೆದಿವೆ. ಬದುಕಿದ್ದ ಅಲ್ಪಾವಧಿಯಲ್ಲಿ, ಬೇಕಾದಷ್ಟನ್ನು ಸಾಧಿಸಿ ಹೋಗಿದ್ದಾರೆ. ಸಿನಿಮಾ, ರಂಗಭೂಮಿ ಮಾತ್ರವಲ್ಲದೆ ಸಮಾಜ ಸೇವೆಯಲ್ಲೂ ಮುಂದಿರುತ್ತಿದ್ದ ಕರುಣಾಮಯಿ ವಿಜಯ್​ ಅಂದ್ರೆ ತಪ್ಪಾಗಲಾರದು.

ಡ್ರೈವರ್​​​ ದೇವರಾಜು ಜತೆ ನಟ ಸಂಚಾರಿ ವಿಜಯ್

ಲಾಕ್​​ ಡೌನ್ ಸಂದರ್ಭದಲ್ಲಿ, ತನ್ನ ಕಾರನ್ನು ಸೇಲ್ ಮಾಡಿ ಬಡವರಿಗೆ ಸಹಾಯ ಮಾಡಿದ್ದ ನಟ, ಕೆಲಸ ಕಳೆದುಕೊಂಡ ಡ್ರೈವರ್​ ದೇವರಾಜುಗೆ ನೆರವಿನ ಹಸ್ತ ಚಾಚಿದ್ದರು. ದೇವರಾಜುಗೆ ಹೊಸ ಬೈಕ್​ವೊಂದನ್ನು ಕೊಡಿಸಿ, ತಾವು ಬಳಸುತ್ತಿದ್ದ ಐಫೋನ್​ ಅನ್ನು ಸಹ ಉಡುಗೊರೆಯಾಗಿ ನೀಡಿದ್ದರು.

ಇದನ್ನೂ ಓದಿ:ಇದಕ್ಕೆ 'ರೇಷನಲ್ ಅವಾರ್ಡ್‌' ಎಂದಿದ್ದರು ಸಂಚಾರಿ ವಿಜಯ್.. ಅಪರೂಪದ ವಿಡಿಯೋ

ತನ್ನ ಬದುಕಿನಲ್ಲಿ ನಟನೆಯನ್ನು ಮಾತ್ರ ತನಗಿಟ್ಟುಕೊಂಡು ತಾನು ಸಂಪಾದಿಸಿದ್ದ ಎಲ್ಲವನ್ನು ದಾನ ಮಾಡಿದ ವಿಜಯ್​​​​​, ಸಾವಿನಲ್ಲೂ ತನ್ನ ದೇಹದ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದರು.

ABOUT THE AUTHOR

...view details