ಕರ್ನಾಟಕ

karnataka

ETV Bharat / state

ಬೆಂಗಳೂರು ಪೊಲೀಸರ ನೆರವಿಗೆ ನಿಂತ ನಟ ಸೋನು ಸೂದ್...! - ಪೊಲೀಸ್ ಆಯುಕ್ತ ಕಮಲ್ ಪಂತ್​​ ಸುದ್ದಿಗಳು

ನೊಂದವರ ಬಾಳಿಗೆ ಬೆಳಕಾಗಿರುವ ಬಾಲಿವುಡ್​ ನಟ ಸೋನು ಸೂದ್​ ಈಗ ರಾಜ್ಯದ ಕೊರೊನಾ ಯೋಧರಿಗೂ ಮನಮಿಡಿದ್ದಾರೆ. ಕಷ್ಟ ಎಂದರೆ ಕರಗುವ ಸೂದ್,​ ಆನ್​ ಸ್ಕ್ರೀನ್​ ಜೊತೆಗೆ ಆಫ್​ ಸ್ಕ್ರೀನ್​ನಲ್ಲಿಯೂ ಹೀರೋ ಅನ್ನಿಸಿಕೊಂಡಿದ್ದಾರೆ.

Actor Sonu Sood sends oxygen concentrator to Bengaluru police staff
ನಟ ಸೋನು ಸೂದ್

By

Published : Apr 27, 2021, 8:38 PM IST

ಬೆಂಗಳೂರು:ಕೊರೊನಾ ಯೋಧರಾಗಿ ದುಡಿಯುತ್ತಿರುವ ಬೆಂಗಳೂರು ನಗರ ಪೊಲೀಸರಿಗೆ ಬಹುಭಾಷಾ ನಟ ಸೋನು ಸೂದ್ ಸಹಾಯ ಹಸ್ತ ಚಾಚಿದ್ದಾರೆ.

ಆಕ್ಸಿಜನ್ ಕಾನ್ಸನ್​​ಟ್ರೇಟರ್ ಯಂತ್ರ

ಬೆಂಗಳೂರು ಪೊಲೀಸರ ನೆರವಿಗೆ ನಿಂತ ನಟ ಸೋನು ಸೂದ್, ತಮ್ಮ ಚಾರಿಟಬಲ್ ಟ್ರಸ್ಟ್​ನಿಂದ ಪೊಲೀಸ್ ಇಲಾಖೆಗೆ ಆಕ್ಸಿಜನ್ ಕಾನ್ಸನ್​​ಟ್ರೇಟರ್ ಯಂತ್ರ ನೀಡಿದ್ದಾರೆ. ಕೊರೊನಾ ವಾರಿಯರ್ಸ್ ಆಗಿರುವ ಪೊಲೀಸರಿಗೆ ಆಕ್ಸಿಜನ್ ಸಪ್ಲೈ ಮಾಡುವ ಯಂತ್ರ ಇದಾಗಿದ್ದು, ಸುಮಾರು 80 ಸಾವಿರ ಬೆಲೆ ಬಾಳುವ ಎರಡು ಆಕ್ಸಿಜನ್ ಕಾನ್ಸನ್​​ಟ್ರೇಟರ್ ಯಂತ್ರ ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​​ ಅವರಿಗೆ ವಿಡಿಯೋ ಕಾಲ್ ಮೂಲಕ ಆಕ್ಸಿಜನ್ ಕಾನ್ಸನ್​​ಟ್ರೇಟರ್ ಯಂತ್ರ ಪಡೆಯುವಂತೆ ಸೋನು ಸೂದ್ ವಿನಂತಿಸಿದ್ದಾರೆ.

ವಿಡಿಯೋ ಕಾಲ್​ನಲ್ಲಿ ಸೋನ್ ಸೂದ್

ಯಾವುದೇ ಪ್ರಚಾರವಿಲ್ಲದೇ ಸೈಲೆಂಟಾಗಿ ಪೊಲೀಸರಿಗೆ ಟ್ರಸ್ಟ್ ಸದಸ್ಯರ‌ ಮೂಲಕ ಆಕ್ಸಿಜನ್ ಯಂತ್ರ ತಲುಪಿಸಿದ್ದಾರೆ.

ಪೊಲೀಸರಿಂದಲೇ 200 ಹಾಸಿಗೆವಿರುವ ಕೋವಿಡ್ ಕೇರ್ ಆರಂಭಕ್ಕೆ ಸಿದ್ಧತೆ:

ಕೊರೊನಾ‌ ಎರಡನೇ ಅಲೆ‌ ತ್ರೀವಗೊಂಡಿದ್ದು ಫ್ರಂಟ್ ಲೈನ್ ವಾರಿಯರ್ಸ್​ಗೆ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಆತ್ಮಸ್ಥೈರ್ಯ ತುಂಬಿದ್ದಾರೆ. ನಗರ‌ ಪೊಲೀಸ್ ಇಲಾಖೆ 300 ಮಂದಿ ಸಿಬ್ಬಂದಿ ಕ್ವಾರಂಟೈನ್​ನಲ್ಲಿದ್ದಾರೆ. ಸೋಂಕಿತ ಪೊಲೀಸರಿಗೆ ಪ್ರತ್ಯೇಕವಾಗಿ ಕೇರ್ ಸೆಂಟರ್ ನಿರ್ಮಾಣ ಮಾಡಲಾಗುತ್ತಿದೆ. ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ವೈಟ್ ಫೀಲ್ಡ್, ಸೌತ್ ಸಿಎಆರ್ ಹೆಡ್​ಕ್ವಾರ್ಟರ್ ಸೇರಿದಂತೆ 200 ಬೆಡ್​ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಆಕ್ಸಿಜನ್ ಪೂರೈಕೆ ಮತ್ತು ಕೆಟರಿಂಗ್ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳುತ್ತಿದ್ದೇವೆ. ಆದಷ್ಟು ಶೀಘ್ರದಲ್ಲಿ ವ್ಯವಸ್ಥೆ ಕಾರ್ಯಗತಗೊಳ್ಳಲಿದೆ. ಪೊಲೀಸರು ಯಾವುದೇ ಆತಂಕಪಡದೇ ಸುರಕ್ಷಿತ ಕ್ರಮ ಅನುಸರಿಸಿಕೊಂಡು ಕಾರ್ಯನಿರ್ವಹಿಸುವಂತೆ ಕರೆ ನೀಡಿದ್ದಾರೆ.

ABOUT THE AUTHOR

...view details