ಸ್ಯಾಂಡಲ್ವುಡ್ ಹಾಸ್ಯ ದಿಗ್ಗಜ ಸಾಧು ಮಹಾರಾಜ್ ಇಂದು ವಸಂತ ನಗರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಸಿನಿಮಾ ಸ್ಟೈಲ್‌ನಲ್ಲಿ ಪಂಚಿಂಗ್ ಡೈಲಾಗ್ ಹೇಳುವ ಮೂಲಕ ಮತಯಾಚಿಸಿದರು.
ರಿಜ್ವಾನ್ ಅರ್ಷದ್ ಹಿಂದೆ ಡಿಕೆಶಿ ಎಂಬ ಹುಲಿ.. 'ಕೈ' ಪರ ಸಾಧು ಮಹರಾಜ್ ಕ್ಯಾಂಪೇನ್! - sadhu kokila by election campaign news
ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ವಸಂತನಗರದಲ್ಲಿಂದು ನಟ, ನಿರ್ದೇಶಕ ಸಾಧು ಕೋಕಿಲ ಮತ ಯಾಚಿಸಿದರು. ಈ ಸಂದರ್ಭದಲ್ಲಿ ರಿಜ್ವಾನ್ ಅರ್ಷದ್ ಉತ್ತಮ ಅಭ್ಯರ್ಥಿ. ಅವರ ಹಿಂದೆ ಡಿ ಕೆ ಶಿವಕುಮಾರ್ ಎಂಬ ಹುಲಿ ಇದೆ. ಚಿರತೆ ಮರದ ಮೇಲೆ ವಾಸಿಸುತ್ತೆ, ಮಿಕ್ಕಿದ ಎಲ್ಲಾ ಪ್ರಾಣಿಗಳು ಬಚ್ಚಿಟ್ಟು ಕೊಂಡು ವಾಸಿಸುತ್ತವೆ. ನಿಮಗೆ ತೊಂದರೆ ಬಂದ್ರೆ ಡಿಕೆಶಿ ಅವರೇ ಬರೋದು ಎಂದು ಪಂಚಿಂಗ್ ಡೈಲಾಗ್ ಹೇಳುವ ಮೂಲಕ ಮತಯಾಚಿಸಿದರು.
ರಿಜ್ವಾನ್ ಅರ್ಷದ್ ಉತ್ತಮ ಅಭ್ಯರ್ಥಿ. ಅವರ ಹಿಂದೆ ಡಿ ಕೆ ಶಿವಕುಮಾರ್ ಎಂಬ ಹುಲಿ ಇದೆ. ಚಿರತೆ ಮರದ ಮೇಲೆ ವಾಸಿಸುತ್ತೆ. ಮಿಕ್ಕಿದ ಎಲ್ಲಾ ಪ್ರಾಣಿಗಳು ಬಚ್ಚಿಟ್ಟುಕೊಂಡು ವಾಸಿಸುತ್ತವೆ. ಆದರೆ, ಏನೇ ಪ್ರಾಬ್ಲಂ ಇರಲಿ, ಎಷ್ಟೇ ಕಷ್ಟ ಬರಲಿ ಹುಲಿ ಮಾತ್ರ ಮೇನ್ ರೋಡ್‌ನಲ್ಲೇ ಹೋಗ್ತಿರುತ್ತೆ. ಇಂತ ಹುಲಿ ಡಿಕೆಶಿ, ನಿಮ್ಮ ಜೊತೆಯಲ್ಲಿ ಯಾವಾಗಲೂ ಇರ್ತಾರೆ ಎಂದು ಪಂಚಿಂಗ್ ಡೈಲಾಗ್ ಹೇಳುವ ಮೂಲಕ ಡಿಕೆಶಿ ಇಡಿ ಬಂಧನದಿಂದ ಹೊರಬಂದ ಬಗ್ಗೆ ಪರೋಕ್ಷವಾಗಿ ಹೊಗಳಿದರು.
ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ. ಯಾಕಂದ್ರೆ, ನಾವು ಹುಟ್ಟಿದಾಗಿನಿಂದಲೂ ನೋಡಿರುವುದು ಒಂದೇ ಅದು ಹಸ್ತ. ಬಡವರಿಗೋಸ್ಕರ ಇರುವಂತ ಏಕೈಕ ಪಕ್ಷ ಅಂದ್ರೆ ಕಾಂಗ್ರೆಸ್. ಅದಕ್ಕಾಗಿ ರಿಜ್ವಾನ್‌ಗೆ ಮತ ಹಾಕಿ, ಅಲ್ಲದೆ ಮನೆ ಮನೆಗೂ ತೆರಳಿ ಜನರನ್ನು ಎಚ್ಚರಿಸಿ ವೋಟ್ ಹಾಕಿಸಿ ರಿಜ್ವಾನ್ ಅವರನ್ನು ಗೆಲ್ಲಿಸಿ. ನಮಗೆಲ್ಲ ಮೋಸ ಆಗ್ತಿದೆ. ಅದು ನಿಮಗೂ ಗೊತ್ತಿದೆ. ದಯವಿಟ್ಟು ಕಾಂಗ್ರೆಸ್‌ಗೆ ಮತ ನೀಡಿ ಎಂದು ಸಾಧು ಕೋಕಿಲ ಸಿನಿಮಾ ಶೈಲಿಯಲ್ಲೇ ಕಲರ್‌ಫುಲ್ ಆಗಿ ಭಾಷಣ ಮಾಡುವ ಮೂಲಕ ಮತಯಾಚಿಸಿದರು.