ಕರ್ನಾಟಕ

karnataka

ETV Bharat / state

ಕರ್ನಾಟಕ ರತ್ನ ಅಪ್ಪು ದೇವರ ಮಗ, ಅವರ ನೆನಪು ನಿರಂತರ: ಸೂಪರ್​ಸ್ಟಾರ್​ ರಜನಿಕಾಂತ್​ - ಸೂಪರ್​ಸ್ಟಾರ್​ ರಜನಿಕಾಂತ್​

ವಿಧಾನಸೌಧದ ಮುಂಭಾಗ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ದಿವಂಗತ ನಟ ಪುನೀತ್ ರಾಜ್​ಕುಮಾರ್​ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಟ ರಜನಿಕಾಂತ್​, ಜೂನಿಯರ್​ ಎನ್​ಟಿಆರ್​ ಮತ್ತಿತರರು ಇದ್ದರು.

actor-rajanikant-talk-about-punith-rajkumar
ಸೂಪರ್​ಸ್ಟಾರ್​ ರಜನಿಕಾಂತ್​

By

Published : Nov 1, 2022, 5:48 PM IST

Updated : Nov 1, 2022, 8:03 PM IST

ಬೆಂಗಳೂರು:ದಿವಂಗತ ಪುನೀತ್​ ರಾಜ್​ಕುಮಾರ್​ ದೇವರ ಮಗ. ಆತ ಇಷ್ಟು ದಿನ ನಮ್ಮೊಂದಿಗೆ ಇದ್ದು, ಈಗ ಮತ್ತೆ ದೇವರ ಬಳಿಗೆ ಹೋಗಿದ್ದಾನೆ. ಅವರ ನೆನಪು ನಮಗೆ ಚಿರಕಾಲ ಎಂದು ಸೂಪರ್​ಸ್ಟಾರ್​ ರಜನಿಕಾಂತ್​ ಹೇಳಿದರು.

ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪ್ಪುಗೆ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರದಾನ ಮಾಡಿರುವುದು ಸಂತಸದ ಸಂಗತಿಯಾಗಿದೆ. ಪುನೀತ್​ ನಮ್ಮನ್ನಗಲಿದ್ದರೂ ಅವರ ನೆನಪು ನಮಗೆ ಚಿರಕಾಲ ಇರಲಿದೆ ಎಂದರು.

ಸೂಪರ್​ಸ್ಟಾರ್​ ರಜನಿಕಾಂತ್​

ಪುನೀತ್​ ರಾಜ್​ಕುಮಾರ್​ ನಮ್ಮೊಂದಿಗೆ ಇದ್ದರೂ ಅವರು ದೇವರ ಮಗನಾಗಿದ್ದರು. ಈಗ ಅವರು ಮತ್ತೆ ದೇವರ ಹತ್ತಿರ ಹೋಗಿದ್ದಾರೆ. ರಾಷ್ಟ್ರಕವಿ ಕುವೆಂಪು, ಮಾಜಿ ಮುಖ್ಯಮಂತ್ರಿ ಎಸ್​ ನಿಜಲಿಂಗಪ್ಪ ಅವರಂತಹ ಶ್ರೇಷ್ಠರಿಗೆ ನೀಡಲಾದ ಪ್ರಶಸ್ತಿಯನ್ನು ಅಪ್ಪುಗೆ ನೀಡಿರುವುದು ಸಂತಸದ ಸಂಗತಿಯಾಗಿದೆ. ಇದಕ್ಕಾಗಿ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ಸಲ್ಲಿಸುವೆ ಎಂದು ತಲೈವಾ ಕನ್ನಡದಲ್ಲೇ ಭಾಷಣ ಮಾಡುವ ಮೂಲಕ ಗಮನ ಸೆಳೆದರು.

ಕರ್ನಾಟಕ ರತ್ನ ಅಪ್ಪು ದೇವರ ಮಗ: ಸೂಪರ್​ಸ್ಟಾರ್​ ರಜನಿಕಾಂತ್​

ಓದಿ:ಮಳೆ ಸಿಂಚನದ ಮಧ್ಯೆ ಪುನೀತ್ ರಾಜಕುಮಾರ್​​ಗೆ ​​ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ

Last Updated : Nov 1, 2022, 8:03 PM IST

ABOUT THE AUTHOR

...view details