ಕರ್ನಾಟಕ

karnataka

ETV Bharat / state

ಕರುನಾಡ ರಾಜಕುಮಾರ ಪುನೀತ್ ರಾಜ್​ಕುಮಾರ್​ ವಿಧಿವಶ.. ಅಭಿಮಾನಿಗಳ ನೆಚ್ಚಿನ ಅಪ್ಪು ಇನ್ನಿಲ್ಲ - Puneet Raj Kumar

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ವಿಕ್ರಂ ಆಸ್ಪತ್ರೆಯಲ್ಲಿ​ ವಿಧಿವಶರಾಗಿದ್ದಾರೆ. ಅಪ್ಪು ಅಗಲಿಕೆಯಿಂದ ಕರುನಾಡು ಶೋಕಸಾಗರದಲ್ಲಿ ಮುಳುಗಿದೆ.

Punith rajkumar
ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್

By

Published : Oct 29, 2021, 3:01 PM IST

Updated : Oct 29, 2021, 7:29 PM IST

ಬೆಂಗಳೂರು: ಅಣ್ಣಾವ್ರ ಮಗ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್​ (47) ವಿಧಿವಶರಾಗಿದ್ದಾರೆ. ಜಿಮ್​ ಮಾಡುವ ವೇಳೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಮನೆ ವೈದ್ಯರು ಪರೀಕ್ಷೆ ನಡೆಸಿದ್ದರು.

ಆ ಬಳಿಕ ಅವರನ್ನು ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೂರು ಗಂಟೆಗಳ ಕಾಲ ವೈದ್ಯರು ಸತತ ಚಿಕಿತ್ಸೆ ನೀಡಿ ಪುನೀತ್​ ರಾಜಕುಮಾರ್ ಬದುಕಿಸಿಕೊಳ್ಳಲು ಮಾಡಿದ ಪ್ರಯತ್ನ ವ್ಯರ್ಥವಾಗಿ ಮಧ್ಯಾಹ್ನ 2:30 ರ ವೇಳೆಗೆ ಕೊನೆಯುಸಿರೆಳೆದರು. ಬಳಿಕ ಈ ವಿಷಯವನ್ನು ವಿಕ್ರಂ ಆಸ್ಪತ್ರೆ ವೈದ್ಯರು ದೃಢಪಡಿಸಿದರೂ ಕೂಡಾ.

ಅಪ್ಪು ಅಗಲಿಕೆಗೆ ಇಡೀ ಕರುನಾಡೇ ಶೋಕಸಾಗರದಲ್ಲಿ ಮುಳುಗಿದೆ.

Last Updated : Oct 29, 2021, 7:29 PM IST

ABOUT THE AUTHOR

...view details