ಕರ್ನಾಟಕ

karnataka

ETV Bharat / state

ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ನಟ ನಿಖಿಲ್ ಕುಮಾರಸ್ವಾಮಿಗೆ ಆಹ್ವಾನ - ನಿಖಿಲ್ ಕುಮಾರಸ್ವಾಮಿ

ಜೆಡಿಎಸ್​ ಯುವ ಮುಖಂಡ ಹಾಗೂ ಸ್ಯಾಂಡಲ್​ ವುಡ್​ ನಟ ನಿಖಿಲ್ ಕುಮಾರಸ್ವಾಮಿಗೆ ಅಯೋದ್ಯೆ ರಾಮ ಮಂದಿರ ಉದ್ಘಾಟನೆಗೆ ಆಮಂತ್ರಣ ಸಿಕ್ಕಿದೆ.

ನಟ ನಿಖಿಲ್ ಕುಮಾರಸ್ವಾಮಿ
ನಟ ನಿಖಿಲ್ ಕುಮಾರಸ್ವಾಮಿ

By ETV Bharat Karnataka Team

Published : Jan 10, 2024, 6:48 PM IST

ಬೆಂಗಳೂರು : ಜನವರಿ 22 ರಂದು ದೇಶದಲ್ಲಿ ಹಬ್ಬದ ಸಂಭ್ರಮ. ಏಕೆಂದರೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಆಗುವ ಮೂಲಕ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲಿದೆ. ಈ ಕಾರ್ಯಕ್ರಮಕ್ಕೆ ಗಣ್ಯರು, ರಾಜಕಾರಣಿಗಳು ಸೇರಿದಂತೆ ಚಿತ್ರರಂಗದವರು ಭಾಗಿಯಾಗಲಿದ್ದಾರೆ. ದಕ್ಷಿಣದ ಕೆಲವೇ ಕೆಲವು ನಟರಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಸಿಕ್ಕಿದೆ.

ಈಗಾಗಗಲೇ ಸಾಕಷ್ಟು ನಟರಿಗೆ ಆಹ್ವಾನ ಸಿಕ್ಕಿದೆ ಅನ್ನೋ ಸುದ್ದಿ ಕೇಳಿ ಬರುತ್ತಿದೆ. ಆದರೆ, ಇಂದು ನಟ ನಿಖಿಲ್ ಕುಮಾರ್ ಅವರಿಗೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ಸಿಕ್ಕಿದೆ. ನಿಖಿಲ್ ಕುಮಾರಸ್ವಾಮಿ ಹಾಗೂ ಇಡೀ ಕುಟುಂಬಕ್ಕೆ ರಾಮ ಜನ್ಮಭೂಮಿ ಟ್ರಸ್ಟ್ ವತಿಯಿಂದ ಆಹ್ವಾನ ಪತ್ರಿಕೆ ನೀಡಿದ್ದು, ಜನವರಿ 22ರಂದು ನಡೆಯಲಿರುವ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಕುಟುಂಬಸ್ಥರು ಭಾಗಿಯಾಗಲಿದ್ದಾರೆ.

ಅಯೋದ್ಯೆ ರಾಮ ಮಂದಿರ ಉದ್ಘಾಟನೆಯ ಆಮಂತ್ರಣ

ಇನ್ನು ವಿಶೇಷ ಎಂದರೆ ಜನವರಿ 22 ರಂದು ನಿಖಿಲ್ ಕುಮಾರಸ್ವಾಮಿ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳಲಿದ್ದಾರೆ. ಹಾಗಾಗಿ ಈ ಭಾರಿಯ ಹುಟ್ಟುಹಬ್ಬ ಮತ್ತಷ್ಟು ವಿಶೇಷವಾಗಲಿದ್ದು, ಅಯೋದ್ಯೆಯ ಶ್ರೀ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಳ್ಳಲಿದ್ದಾರೆ.

ಶ್ರೀ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿರೋ ವಿಚಾರವಾಗಿ ನಟ ನಿಖಿಲ್ ಕುಮಾರ್​ಸ್ವಾಮಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ರಾಮ ಜನ್ಮಭೂಮಿ ಟ್ರಸ್ಟ್​​​ಗೆ ಈ ಮೂಲಕ ಧನ್ಯವಾದ ತಿಳಿಸಿದ್ದಾರೆ. ರಾಮಮಂದಿರದ ಸೇವಾ ಕೈಂಕರ್ಯದಲ್ಲಿ ಭಾಗಿಯಾಗುವುದು ಖುಷಿಯ ವಿಚಾರ ಎಂದು ತಿಳಿಸಿದ್ದಾರೆ.

ಬಾಲಿವುಡ್​ ತಾರೆಯರಿಗೂ ಸಿಕ್ಕಿದೆ ಆಹ್ವಾನ :ಇನ್ನೊಂದೆಡೆರಾಮಮಂದಿರ ಉದ್ಘಾಟನೆಗೆ ಬಾಲಿವುಡ್​ ತಾರೆಯರಾದ ಅಮಿತಾಭ್ ಬಚ್ಚನ್, ಕಂಗನಾ ರಣಾವತ್, ಆಲಿಯಾ ಭಟ್ ಸೇರಿದಂತೆ ಹಲವು ನಟ-ನಟಿಯರಿಗೂ ಐತಿಹಾಸಿಕ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಗಾಯಕ ಸೋನು ನಿಗಮ್ ಕೂಡ ಭಾಗಿಯಾಗಲಿದ್ದಾರೆ.

ಕಾರ್ಯಕ್ರಮಕ್ಕೆ ಆಹ್ವಾನ ಸಿಕ್ಕ ಬೆನ್ನಲ್ಲೇ 'ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ಅವಕಾಶ ಸಿಕ್ಕಿರುವುದಕ್ಕೆ ತಮಗೆ ತುಂಬಾ ಖುಷಿಯಾಗಿದೆ'' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಆಮಂತ್ರಣ ಪತ್ರಿಕೆಯ ಕಿರುನೋಟವನ್ನು ಪೋಸ್ಟ್​​ ಮಾಡುವ ಮೂಲಕ ತಮ್ಮ ಖುಷಿಯನ್ನು ಸೋನು ನಿಗಮ್​ ಹೊರಹಾಕಿದ್ದರು. ಆಮಂತ್ರಣ ಪತ್ರಿಕೆ ನೋಡಿದ ನೆಟಿಜನ್ಸ್​ ಕೂಡ ಪುಳಕಿತರಾಗಿದ್ದರು. ಕಾಮೆಂಟ್ಸ್​​ ಮೂಲಕ ಸೋನು ನಿಗಮ್ ಅವರ ಮೇಲಿನ ಪ್ರೀತಿ ಮತ್ತು ಗೌರವ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ :ಭವ್ಯ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ; ಗಾಯಕ ಸೋನು ನಿಗಮ್ ಹರ್ಷ ​

ABOUT THE AUTHOR

...view details