ಕರ್ನಾಟಕ

karnataka

ETV Bharat / state

ಸಿನಿ ತಾರೆಯರು ತಪ್ಪು ಮಾಡಿದ್ರೆ ಕೇಳೋರೆ ಇಲ್ಲ... ಆರೋಪಿ ವಿಜಯ್ ಗಂಭೀರ ಆರೋಪ - Actor Komal

ನಟ ಕೋಮಲ್ ಕಾರ್​ನಿಂದ ನನ್ನ ಬೈಕ್​ಗೆ ಡಿಕ್ಕಿ ಹೊಡೆಸಿದ್ದರು. ನಂತರ ನನ್ನ ಮೇಲೆಯೇ ಹಲ್ಲೆಗೆ ಮುಂದಾದರು. ನಾನು ಹಲ್ಲೆ ಮಾಡಿದೆ ಎಂದು ಆರೋಪಿ ವಿಜಯ್​ ಪೊಲೀಸರ ಎದುರು ತಿಳಿಸಿದ್ದಾರೆ.

ನಟ ಕೋಮಲ್​

By

Published : Aug 14, 2019, 5:24 PM IST

ಬೆಂಗಳೂರು: ಮಲ್ಲೇಶ್ವರಂ ಸಂಪಿಗೆ ರಸ್ತೆ ಬಳಿ ತೆರಳುತ್ತಿದ್ದಾಗ ನನ್ನ ಬೈಕ್​ಗೆ ಕಾರ್​ ಡಿಕ್ಕಿ ಹೊಡೆಯಿತು. ಈ ವಿಚಾರವಾಗಿ ನಟ ಕೋಮಲ್​ ಹಾಗೂ ಬೈಕ್​ ಸವಾರ ವಿಜಯ ಮಧ್ಯೆ ಜಗಳ ನಡೆದಿತ್ತು. ಪ್ರಶ್ನೆ ಮಾಡಿದ್ದಕ್ಕೆ ಕೋಮಲ್​ ಏಕಾ ಏಕಿ ನನ್ನ ಮೇಲೆ ಹಲ್ಲೆಗೆ ಮುಂದಾದರು. ಆಗ, ನಾನು ಅವರ ಮೇಲೆ ಹಲ್ಲೆ ಮಾಡಿದ್ದೇನೆ. ಅವರ ಮೇಲೆ ವೈಯಕ್ತಿವಾಗಿ ನನಗೆ ಯಾವುದೇ ದ್ವೇಷವಿಲ್ಲ ಎಂದು ವಿಜಯ್​ ಪೊಲೀಸರಿಗೆ ತಿಳಿಸಿದ್ದಾರೆ.

ನಟ ಕೋಮಲ್​

ಘಟನೆ ನಡೆದ ದಿನದಂದೇ ವಿಜಯ್ ಅವರನ್ನ ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದರು. ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತನಿಖೆ ನಡೆಸಿದಾಗ ವಿಜಯ್ ಘಟನೆಯ ವಿವರವನ್ನು ಪೊಲೀಸರ ಎದುರು ತಿಳಿಸಿದ್ದಾರೆ.

ನಟ ಕೋಮಲ್ ತಮ್ಮ ಪುತ್ರಿಯನ್ನು ಟ್ಯೂಷನ್​ಗೆ ಬಿಡಲು ಕಾರಿನಲ್ಲಿ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ABOUT THE AUTHOR

...view details