ಲೋಕಸಭೆ ಚುನಾವಣೆ ಮತ ಎಣಿಕೆ ಬೆಳಗಿನಿಂದ ಆರಂಭವಾಗಿದ್ದು ಇಂದು ಮಧ್ಯಾಹ್ನದ ವೇಳೆಗೆ ನಿಖರ ಫಲಿತಾಂಶ ಹೊರಬೀಳಲಿದೆ. ಇನ್ನು ರಾಜ್ಯದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು ಬಿಜೆಪಿ ಈಗಾಗಲೇ ಸಂಭ್ರಮ ಆಚರಿಸುತ್ತಿದೆ.
ಯಾರನ್ನು ಗೆಲ್ಲಿಸಬೇಕು, ಯಾರನ್ನು ಮೂಲೆಯಲ್ಲಿ ಕೂರಿಸಬೇಕೆಂಬುದು ಜನರಿಗೆ ಗೊತ್ತು: ನಟ ಜಗ್ಗೇಶ್ - undefined
ಯಾರನ್ನು ಗೆಲ್ಲಿಸಬೇಕು ಹಾಗೂ ಯಾರನ್ನು ಸೋಲಿಬೇಕು ಎಂಬುದು ಜನರಿಗೆ ಚೆನ್ನಾಗಿ ಗೊತ್ತು. ನಮ್ಮ ಜನರು ಬಹಳ ಪ್ರಜ್ಞಾವಂತರು. ಎಷ್ಟು ದುಡ್ಡಿನ ಆಮಿಷ ತೋರಿಸಿದರೂ ಕಡೆಗೆ ಅವರು ಸತ್ಯದ ಕಡೆ ಬೆರಳು ಎತ್ತುತ್ತಾರೆ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ನಟ ಜಗ್ಗೇಶ್ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಜಗ್ಗೇಶ್ ವಾಡಿಕೆಯಂತೆ ರಾಷ್ಟ್ರದ ಚುನಾವಣೆ ಬಗ್ಗೆ ನಾವು ಎರಡು ತಿಂಗಳ ನಡಾವಳಿ ಗಮನಿಸುತ್ತಿದ್ದೇವೆ. ದೇಶದಲ್ಲಿ ನರೇಂದ್ರ ಮೋದಿಯನ್ನು ಮಣಿಸಬೇಕೆಂದು ಎಲ್ಲಾ ಒಗ್ಗಟ್ಟಾಗಿದ್ದರು. ನಾನು ಶೂಟಿಂಗ್ ಹೋದ ವೇಳೆ ಗ್ರಾಮೀಣ ಪ್ರದೇಶದ ಜನರನ್ನು ಮಾತನಾಡಿಸುತ್ತಿದ್ದೆ. ಆಗ ಆ ಜನರು ಮೋದಿ ಆಡಳಿತದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ನೀವು ಜನರ ಬಳಿ ಎಷ್ಟೇ ಸುಳ್ಳು ಹೇಳಿದರೂ ಹೊರಗೆ ನಗುತ್ತಾರೆ. ಎಷ್ಟೇ ದುಡ್ಡು ಕೊಟ್ಟು ಜನರನ್ನು ಸೇರಿಸಿದರೂ ಬಂದು ಭಾಷಣ ಕೇಳುತ್ತಾರೆ. ಆದರೆ ಕಡೆಗೆ ತಮ್ಮ ಬೆರಳನ್ನು ಸತ್ಯದ ಕಡೆ ಎತ್ತುತ್ತಾರೆ ಎಂಬುದಕ್ಕೆ ಇಂದಿನ ಫಲಿತಾಂಶ ಸಾಕ್ಷಿಯಾಗಿದೆ.
ಇನ್ನು ಜ್ಯೋತಿಷಿಗಳು ಕೂಡಾ ಕಣ್ಣಿಗೆ ಕಟ್ಟುವಂತೆ ಇಂತವರೇ ಗೆಲ್ಲುತ್ತಾರೆ ಎಂದು ಹೇಳುತ್ತಾರೆ. ಅಂತ ಜ್ಯೋತಿಷಿಗಳನ್ನು ನೋಡಿದರೆ ನನಗೆ ಅಯ್ಯೋ ಎನಿಸುತ್ತದೆ. ಆದರೆ ಜನರು ಮಾತ್ರ ಬಹಳ ಪ್ರಜ್ಞಾವಂತರು. ಯಾರನ್ನು ಮೂಲೆಯಲ್ಲಿ ಕೂರಿಸಬೇಕು, ಯಾರನ್ನು ಗೆಲ್ಲಿಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತು ಎಂದು ಜಗ್ಗೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.