ಬೆಂಗಳೂರು:ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರ ಮತಪ್ರಚಾರಕ್ಕಿಳಿದ ನಟ ಜಗ್ಗೇಶ್ ಫಿಲ್ಮಿ ಸ್ಟೈಲ್ ನಲ್ಲಿ ಇಂದು ಕೆಲ ಪಂಚಿಂಗ್ ಭಾಷಣ ಮಾಡಿದರು.
ಸೋಮಶೇಖರ್ ಪರ ಅಖಾಡಕ್ಕಿಳಿದ ನಟ ಜಗ್ಗೇಶ ಪಂಚಿಂಗ್ ಡೈಲಾಗ್ ಹೀಗಿತ್ತು! - ಎಸ್.ಟಿ.ಸೋಮಶೇಖರ್ ಪರ ಪ್ರಚಾರ ಮಾಡಿದ ನಟ ಜಗ್ಗೇಶ್ ಲೆಟೆಸ್ಟ್ ನ್ಯೂಸ್
ಇಂದು ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರ ಮತ ಪ್ರಚಾರಕ್ಕಿಳಿದ ನಟ ಜಗ್ಗೇಶ್ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡರು ಚುನಾವಣೆ ಇದ್ದಾಗ ಬರುತ್ತಾರೆ. ಕೆಲವರು ರೋಷ ತುಂಬಿ ಕಳಿಸಿದರೆ ಮತ್ತೆ ಕಾಣಿಸಿಕೊಳ್ಳುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.
![ಸೋಮಶೇಖರ್ ಪರ ಅಖಾಡಕ್ಕಿಳಿದ ನಟ ಜಗ್ಗೇಶ ಪಂಚಿಂಗ್ ಡೈಲಾಗ್ ಹೀಗಿತ್ತು! ನಟ ಜಗ್ಗೇಶ್](https://etvbharatimages.akamaized.net/etvbharat/prod-images/768-512-5203097-thumbnail-3x2-paggiljpg.jpg)
ಕಗ್ಗಲೀಪುರದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡರಿಗೆ ಟಾಂಗ್ ನೀಡಿದರು. ಜೆಡಿಎಸ್ನ ಜವರಾಯಿಗೌಡರಿಗೆ ವಯಸ್ಸಾಗಿದೆ. ಯಾರೋ ಹೇಳಿಕೊಟ್ಟರು ಎಂದು ಇದ್ದಕ್ಕಿದ್ದಂತೆ ರೋಷಾವೇಶ ಬಂದು ಸೋಮಶೇಖರ್ ವಿರುದ್ಧ ಡೈಲಾಗ್ ಹೊಡೆದಿದ್ದಾರೆ. ಅತ್ತು ಸೆಂಟಿಮೆಂಟ್ ಕ್ರಿಯೇಟ್ ಮಾಡುತ್ತಿದ್ದಾರೆ. ಅಳುವವರನ್ನು ಕಂಡರೆ ಜನ ಇಷ್ಟ ಪಡುವುದಿಲ್ಲ. ಜನರಿಗೆ ನಗಿಸುವವರು ಬೇಕು. ಕಣ್ಣೀರು ಒರೆಸುವವರು ಬೇಕು. ಆ ಕೆಲಸ ಯಡಿಯೂರಪ್ಪ ಮಾಡುತ್ತಾರೆ ಎಂದು ಟಾಂಗ್ ನೀಡಿದರು.
ಜನ ಯಾವುದೇ ಸೋಮಾರಿತನ ಇಲ್ಲದೇ ಮತ ಚಲಾಯಿಸಿ. ತಂದೆ ಸಮಾನರಾದ ಯಡಿಯೂರಪ್ಪ ಸರ್ಕಾರ ಬಲಿಷ್ಠವಾಗಬೇಕು. ಈ ಕ್ಷೇತ್ರದಲ್ಲಿ ಹಿಂದೆ ಬಿಜೆಪಿ ಇತ್ತು. ಆದರೆ ಜನರಿಗೆ ಬಿಜೆಪಿ ಇಲ್ಲ ಎನ್ನುವ ವೇದನೆ ಇತ್ತು. ಆ ವೇದನೆ ದೇವರಿಗೆ ತಲುಪಿದೆ. ಅದಕ್ಕಾಗಿ ಉಪಚುನಾವಣೆ ಬಂದಿದೆ. ಜೆಡಿಎಸ್ ಜವರಾಯಿಗೌಡ ಚುನಾವಣೆ ಇದ್ದಾಗ ಬರುತ್ತಾರೆ. ಕೆಲವರು ರೋಷ ತುಂಬಿ ಕಳಿಸಿದರೆ ಮತ್ತೆ ಕಾಣಿಸಿಕೊಳ್ಳುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.