ಬೆಂಗಳೂರು :2020-21ನೇ ಸಾಲಿನಲ್ಲಿ ಪಾಲಿಕೆ ಶಾಲೆಗಳಿಗೆ ಸ್ವೆಟರ್ ಪೂರೈಕೆ ಮಾಡಲು ನಿರ್ಧಾರ ಮಾಡಲಾಗಿತ್ತು. ಈ ಸಂಬಂಧ ಟೆಂಡರ್ ಕರೆಯದೆ ನೇರವಾಗಿ ಸ್ವೆಟರ್ ಗಳನ್ನ ಖರೀದಿಸಲು, ಕರ್ನಾಟಕ ನಿಗಮಕ್ಕೆ ಸ್ವೆಟರ್ಗಳನ್ನು ಸರಬರಾಜು ಮಾಡಲು ಆದೇಶವೂ ಆಗಿತ್ತು.
ಆದರೆ, ನವರಸ ನಾಯಕ ಜಗ್ಗೇಶ್ ಸಹೋದರ ಕೋಮಲ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಸ್ವೆಟರ್ ಖರೀದಿ ಟೆಂಡರ್ನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಸಿ ಎಸ್ ರಘು ನೇತೃತ್ವದಲ್ಲಿ ಹಲವಾರು ಕಾರ್ಯಕರ್ತರು, ನಿನ್ನೆ ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ರು.
ಈ ಕುರಿತಂತೆ ನಟ ಜಗ್ಗೇಶ್ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಶಾಲಾ ಮಕ್ಕಳಿಗೆ ಸ್ವೆಟರ್ ವಿತರಣೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪದಲ್ಲಿ, ಸುಖಾಸುಮ್ಮನೆ ತಮ್ಮ ಹೆಸರು ಎಳೆದು ತಂದಿರುವ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಘು ವಿರುದ್ಧ ನಟ ಜಗ್ಗೇಶ್ ಆಕ್ರೋಶ ಹೊರ ಹಾಕಿದ್ದಾರೆ. ರಘು ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿರುವ, ಪ್ರತಿಗಳನ್ನ ಟ್ಟಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಯಾರೋ ಮಾಡಿದ ತಪ್ಪಿಗೆ, ನನ್ನ ಹೆಸರು ಯಾಕೆ ತಂದಿರಿ. ಮಾಧ್ಯಮಗಳಲ್ಲಿ ನನ್ನ ತೇಜೋವಧೆ ಮಾಡಿದ್ದೀರಿ ಎಂದು ರಘು ವಿರುದ್ಧ ಕಿಡಿಕಾರಿದ್ದಾರೆ.