ಕರ್ನಾಟಕ

karnataka

ETV Bharat / state

ಕ್ಷೇತ್ರದ ಅಭಿವೃದ್ಧಿಗೆ ಡಿ.ಕೆ.ಮೋಹನ್ ಗೆಲ್ಲಿಸಿ: ಕೈ ಅಭ್ಯರ್ಥಿ ಪರ ಧ್ರುವ ಸರ್ಜಾ ಪ್ರಚಾರ

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಮೋಹನ್ ಪರವಾಗಿ ಇಂದು ನಟ‌ ಧ್ರುವಸರ್ಜಾ ಬೆಂಗಳೂರಿನ ರಾಮಮೂರ್ತಿನಗರ, ಕೌದೇನಹಳ್ಳಿ, ಅಕ್ಷಯನಗರದಲ್ಲಿ ಮತ ಪ್ರಚಾರ ನಡೆಸಿದರು.

actor
ನಟ ಧ್ರುವಸರ್ಜಾ ಪ್ರಚಾರ

By

Published : May 7, 2023, 2:01 PM IST

ಕೈ ಅಭ್ಯರ್ಥಿ ಪರ ಧ್ರುವ ಸರ್ಜಾ ಪ್ರಚಾರ

ಬೆಂಗಳೂರು: ಬಹಿರಂಗ ಪ್ರಚಾರಕ್ಕೆ ನಾಳೆ ಒಂದೇ ದಿನ ಬಾಕಿಯಿದ್ದು, ರಣ ಬಿಸಿಲ ನಡುವೆಯೂ ಅಭ್ಯರ್ಥಿಗಳು ತಮ್ಮ ಪಕ್ಷದ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆಯಾ ಕ್ಷೇತ್ರಗಳಲ್ಲಿ‌ ಸ್ಟಾರ್ ಪ್ರಚಾರಕರು ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಮತ ಯಾಚಿಸುತ್ತಿದ್ದಾರೆ.

ಇಂದು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅರ್ಭ್ಯರ್ಥಿ ಡಿ.ಕೆ.ಮೋಹನ್ ಪರವಾಗಿ ಸ್ಯಾಂಡಲ್‌ವುಡ್ ನಟ‌ ಧ್ರುವಸರ್ಜಾ ಪ್ರಚಾರ ನಡೆಸಿದರು. ರಾಮಮೂರ್ತಿನಗರ, ಕೌದೇನಹಳ್ಳಿ, ಅಕ್ಷಯನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅವರು ಕ್ಯಾಂಪೇನ್ ಮಾಡಿದರು. ಕ್ಷೇತ್ರದ ಅಭಿವೃದ್ಧಿ ಆಗಬೇಕಾದರೆ ಡಿ.ಕೆ.ಮೋಹನ್ ಅವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ವಿನಂತಿಸಿಕೊಂಡರು.

ಮಾಧ್ಯಮಗಳೊಂದಿಗೆ ಮಾತನಾಡಿದ ಧ್ರುವ ಸರ್ಜಾ, ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷನಾಗಿನಿಂದಲೂ ಡಿ.ಕೆ.ಮೋಹನ್ ಅವರು ನನಗೆ ಪರಿಚಯ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ‌ ಸ್ಫರ್ಧೆ ಮಾಡುತ್ತಿರುವ ವಿಚಾರ ಗೊತ್ತಾದ ಬಳಿಕ ಸ್ವಯಂಪ್ರೇರಿತವಾಗಿ ಅಣ್ಣನ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಮತದಾನ ಎಲ್ಲರ ಹಕ್ಕು.‌ ಯುವ ಮತದಾರರು ಕಡ್ಡಾಯವಾಗಿ ವೋಟು ಹಾಕಬೇಕು. ಕ್ಷೇತ್ರದಲ್ಲಿ ಯಾರು ಗೆಲ್ತಾರೆ ಎನ್ನುವುದು ಗೊತ್ತಿಲ್ಲ. ಆದರೆ ಡಿ.ಕೆ.ಮೋಹನ್ ಅವರನ್ನು ಗೆಲ್ಲಿಸುವಂತೆ ಪ್ರಚಾರ ಮಾಡುವುದಾಗಿ ತಿಳಿಸಿದರು.

ಡಿ.ಕೆ.ಮೋಹನ್ ಮಾತನಾಡಿ, ಕೆ.ಆರ್.ಪುರ ಕಾಂಗ್ರೆಸ್ ಭದ್ರಕೋಟೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಎ.ಕೃಷ್ಣಪ್ಪ ಇಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದಾರೆ. ಅವರ ಕಾಯಕವೇ ನನಗೆ ಶ್ರೀರಕ್ಷೆ.

ಅಧಿಕಾರದಲ್ಲಿರುವಾಗ ಬಿಜೆಪಿ ಶಾಸಕ ಬೈರತಿ ಬಸವರಾಜ್ ಏನೂ ಕೆಲಸ ಮಾಡಿಲ್ಲ. ಕ್ಷೇತ್ರದಲ್ಲಿ ಮೂಲಸೌಕರ್ಯ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿವೆ. ಶಾಸಕರಾಗಿದ್ದಾಗ ಮಾಡದ ಅಭಿವೃದ್ದಿ ಕೆಲಸ‌ ಈಗ ಮಾಡುತ್ತಾರಾ ಎಂದು ಪ್ರಶ್ನಿಸಿದರು. ನಾನು ಕ್ಷೇತ್ರದ ನಿವಾಸಿಯಾಗಿದ್ದು ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷ. ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಹೀಗಾಗಿ ಮತದಾರರು ತನ್ನನ್ನು ಗೆಲ್ಲಿಸಿದರೆ ರಸ್ತೆ, ಚರಂಡಿ ಇನ್ನಿತರ ಅಗತ್ಯ ಸೌಲಭ್ಯ ಒದಗಿಸಲು‌ ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.

ಲಕ್ಷ್ಮೀ ಹೆಬ್ಬಾಳ್ಕರ್​ ಪರ ಶಿವರಾಜ್ ಕುಮಾರ್ ಪ್ರಚಾರ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಪರ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ನಿನ್ನೆ ಭರ್ಜರಿ ಪ್ರಚಾರ ನಡೆಸಿದ್ದಾರೆ. "ಲಕ್ಷ್ಮೀ ಹೆಬ್ಬಾಳ್ಕರ್ ನಿಮ್ಮ ಮನೆ ಮಗಳು. ಇಷ್ಟು ಕಡಿಮೆ ಅವಧಿಯಲ್ಲಿ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಿದ್ದಾರೆ. ಮತ್ತೊಮ್ಮೆ ಅವರನ್ನು ಆರಿಸಿ ತಂದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲಿದ್ದಾರೆ. ಅವರಿಗೆ ಆಶೀರ್ವಾದ ಮಾಡಿ" ಎಂದು ಕೇಳಿಕೊಂಡರು.

ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಶಿವರಾಜ್ ಕುಮಾರ್ ಅಣ್ಣನವರು ಬಂದಿದ್ದು ನನಗೆ ತುಂಬಾ ಖುಷಿಯಾಗಿದೆ. ಇಲ್ಲಿ ಅವರಿಗಾಗಿ ದೊಡ್ಡ ಅಭಿಮಾನಿ ಬಳಗ ಕಾಯುತ್ತಿರುವುದು ನೋಡಿ ಹೆಮ್ಮೆ ಎನಿಸುತ್ತಿದೆ ಎಂದರು.

ಇದನ್ನೂ ಓದಿ:ಮೋದಿ‌ ರೋಡ್ ಶೋ‌ದಿಂದ ಯಾವುದೇ ಪ್ರಯೋಜನವಿಲ್ಲ: ಹೆಚ್​.ಡಿ.ದೇವೇಗೌಡ

ABOUT THE AUTHOR

...view details