ಕರ್ನಾಟಕ

karnataka

ETV Bharat / state

ನಟ ದರ್ಶನ್​ಗೆ ವಂಚನೆ, ಕೇಸ್​ನ ಸಂಪೂರ್ಣ ತನಿಖೆಗೆ ಸೂಚನೆ: ಗೃಹ ಸಚಿವ ಬೊಮ್ಮಾಯಿ - ನಟ ದರ್ಶನ್​ಗೆ ವಂಚನೆ ಬಗ್ಗೆ ಸಂಪೂರ್ಣ ತನಿಖೆಗೆ ಸೂಚನೆ

ನಟ ದರ್ಶನ್​ಗೆ ವಂಚನೆ ಪ್ರಕರಣದ ಸಂಪೂರ್ಣ ತನಿಖೆಯನ್ನು ನಡೆಸುವಂತೆ ಮೈಸೂರು ಪೊಲೀಸರಿಗೆ ಸೂಚಿಸಿರುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಗೃಹ ಸಚಿವ ಬೊಮ್ಮಾಯಿ
ಗೃಹ ಸಚಿವ ಬೊಮ್ಮಾಯಿ

By

Published : Jul 15, 2021, 2:02 PM IST

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಗೆ ವಂಚನೆ ಮಾಡಲು ಯತ್ನ ಹಾಗೂ ಒಟ್ಟು ಪ್ರಕರಣದ ಸಂಪೂರ್ಣ ತನಿಖೆಗೆ ಮೈಸೂರು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡೀ ಪ್ರಕರಣ ಸಂಪೂರ್ಣ ತನಿಖೆಗೆ ಮೈಸೂರು ಪೊಲೀಸರಿಗೆ ಹೇಳಿದ್ದೇನೆ. ವಿಚಾರಣೆ ಆಗಲಿ, ಪೊಲೀಸರು ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಮೈಸೂರು ಪೊಲೀಸ್ ಕೈಯಲ್ಲೇ ಪೊಲೀಸ್ ಇಲಾಖೆ ಇದೆ. ಅಲ್ಲಿನ ಪೊಲೀಸ್ ಇಲಾಖೆ ಯಾರ ಕೈಯಲ್ಲೂ ಇಲ್ಲ. ಊಹಾಪೋಹಗಳಿಗೆ ಉತ್ತರ ಕೊಡುವ ಅಗತ್ಯ ಇಲ್ಲ ಎಂದರು.

ಇದನ್ನೂ ಓದಿ:ನಟ ದರ್ಶನ್ ಕಡೆಯವರು ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ: ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

ಪ್ರಕರಣದಲ್ಲಿ ಮೋಸ ಮಾಡಲು ಯತ್ನಿಸಿದವರ ತಲೆ ಕಡಿಯುತ್ತೇನೆ ಎಂಬ ದರ್ಶನ್ ಹೇಳಿಕೆಗೆ ಗೃಹ ಸಚಿವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ABOUT THE AUTHOR

...view details