ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಇಲ್ಲದೇ ಜನರು ಪ್ರಾಣ ಬಿಡುತ್ತಿದ್ದಾರೆ. ಈ ಬಗ್ಗೆ ನಟ ಚೇತನ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿನಿಮಾ ಜತೆಗೆ ಸಾಮಾಜಿಕ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ಚೇತನ್, ಬಿಜೆಪಿ ಸರ್ಕಾರ 'ಸ್ಕ್ಯಾಮ್ ಸರ್ಕಾರ' ಎಂದು ದೂಷಿಸಿದ್ದಾರೆ.
ಎರಡು ದಿನದ ಹಿಂದೆ ಬಿಜೆಪಿ ನಾಯಕರುಗಳು ಬಿಬಿಎಂಪಿ ಬೆಡ್ ಮತ್ತು ಆಕ್ಸಿಜನ್ ಹಗರಣ ಬಯಲು ಮಾಡಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, 'ಬಿಜೆಪಿ ನಾಯಕರು ದೊಡ್ಡ ಘನಕಾರ್ಯ ಮಾಡಿದ್ವಿ ಅಂತಾ ಹೀರೋಗಳ ರೀತಿ ಪೋಸ್ ಕೊಡ್ತಾ ಇದ್ದಾರೆ. ಇವ್ರು ಸಮಾಜದಲ್ಲಿ ಕೋಮು ವಿಷ ಬೀಜವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ' ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ:ಬೆಡ್ಗಾಗಿ ಸಿಎಂ ನಿವಾಸದೆದುರು ಗೋಗರೆದ ಸೋಂಕಿತನ ಪತ್ನಿ: ಆಸ್ಪತ್ರೆಗೆ ಹೋಗುವಾಗಲೇ ಹಾರಿಹೋಯ್ತು ಪ್ರಾಣ
ಸೋಂಕಿನಿಂದ ಜನರು ಪ್ರಾಣ ಬಿಡುತ್ತಿರುವುದಕ್ಕೆ ಸಿಎಂ, ಆರೋಗ್ಯ ಸಚಿವ ಮತ್ತು ಬಿಜೆಪಿ ಸರ್ಕಾರವೇ ನೇರ ಹೊಣೆ ಎಂದು ಚೇತನ್ ಆರೋಪಿಸಿದ್ದಾರೆ.