ಬೆಂಗಳೂರು:ರಮೇಶ್ ಜಾರಕಿಹೊಳಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ನಟ ಚೇತನ್, ಸಚಿವ ರಮೇಶ್ ಜಾರಕೀಹೊಳಿ, ತನ್ನ ಹೆಂಡತಿಯಲ್ಲದ ಮಹಿಳೆಯ ಜೊತೆ ಒಮ್ಮತದ ದೈಹಿಕ ಸಂಬಂಧವನ್ನು ಹೊಂದಿರುವುದು ಅನೈತಿಕ ಮತ್ತು ಅದು ಟೀಕಾರ್ಹವಾಗಿದೆ. ಆದರೆ ಜಾರಕಿಹೊಳಿ ಅವರು ಸರ್ಕಾರಿ ಕೆಲಸದ ಅಮಿಷವೊಡ್ಡಿ ಮಹಿಳೆಯಿಂದ ಲೈಂಗಿಕತೆ ಬಯಸಿದ್ದರೆ, ಅದು ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಮೊಕದ್ದಮೆಗಳಿಗೆ ಅರ್ಹವಾಗಿದೆ ಅಂತ ಫೇಸ್ಬುಕ್ ಹಾಗೂ ಟ್ವಿಟರ್ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ.
ರಮೇಶ್ ಜಾರಕಿಹೊಳಿ ಪ್ರಕರಣ: ಫೇಸ್ಬುಕ್ನಲ್ಲಿ ನಟ ಚೇತನ್ ಬರೆದಿದ್ದೇನು? - ಫೇಸ್ಬುಕ್ನಲ್ಲಿ ನಟ ಚೇತನ್ ಬರೆದಿದ್ದೇನು..?
ರಮೇಶ್ ಜಾರಕಿಹೊಳಿ ಪ್ರಕರಣ ಸದ್ಯ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನಟ ಚೇತನ್, ಈ ಪ್ರಕರಣ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಮೊಕದ್ದಮೆಗಳಿಗೆ ಅರ್ಹವಾಗಿದೆ ಎಂದಿದ್ದಾರೆ.
ನಟ ಚೇತನ್
Last Updated : Mar 2, 2021, 10:18 PM IST