ಬೆಂಗಳೂರು: ಬಿಡಿಎ ವತಿಯಿಂದ ಅಕ್ರಮವಾಗಿ ಹಂಚಿಕೆ ಮಾಡಿರುವ ಜಾಗವನ್ನು ಬಿಡಿಸಿಕೊಡಿ ಎಂದು ನಟ ಚೇತನ್, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಬಿಡಿಎನಿಂದ ಅಕ್ರಮ ಜಾಗ ಹಂಚಿಕೆ.. ಮಾಜಿ ಪ್ರಧಾನಿ ಹೆಚ್ಡಿಡಿ ಭೇಟಿ ಮಾಡಿದ ನಟ ಚೇತನ್ - ಮಾಜಿ ಪ್ರಧಾನಿ ದೇವೇಗೌಡ
ಬಿಡಿಎ ವತಿಯಿಂದ ಅಕ್ರಮವಾಗಿ ಹಂಚಿಕೆ ಮಾಡಿರುವ ಜಾಗವನ್ನು ಬಿಡಿಸಿಕೊಡಿ ಎಂದು ನಟ ಚೇತನ್, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿ ಮನವಿ ಮಾಡಿದ್ದಾರೆ.
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆಯುತ್ತಿದ್ದ ಸಭೆಗೆ ಆಗಮಿಸಿ, ದೇವೇಗೌಡರನ್ನು ಭೇಟಿಯಾದ ನಟ ಚೇತನ್, ನಂದಿನಿ ಲೇಔಟ್ ವ್ಯಾಪ್ತಿಯ ರಾಮಕೃಷ್ಣನಗರದಲ್ಲಿರುವ ಮಕ್ಕಳ ಆಟದ ಮೈದಾನವನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಇದನ್ನು ಮಕ್ಕಳ ಆಟದ ಮೈದಾನಕ್ಕೆ ಮೀಸಲಿಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಹೆಚ್ಡಿಡಿ, ಸಭೆ ಇರುವುದರಿಂದ ಸಂಜೆವರೆಗೂ ಇಲ್ಲೇ ಇರುತ್ತೇನೆ. ಆ ನಂತರ ಚರ್ಚಿಸೋಣ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ನಟ ಚೇತನ್ ಮಾತನಾಡಿ, ಮಕ್ಕಳು ಆಟವಾಡುವ ಮೈದಾನವನ್ನು ಜೆಸಿಬಿ ಮೂಲಕ ಒಡೆಯುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ವ್ಯಾಪ್ತಿಯ ರಾಮಕೃಷ್ಣನಗರದಲ್ಲಿರುವ ಮಕ್ಕಳ ಆಟದ ಮೈದಾನ ದಶಗಳಿಂದಲೂ ಇದೆ. ಆದರೆ, ಈಗ ಬಿಡಿಎ ಆ ಜಾಗವನ್ನು ಅಕ್ರಮವಾಗಿ ಹಂಚಿಕೆ ಮಾಡಿದೆ. ಹಲವು ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜವಾಗಲಿಲ್ಲ ಎಂದು ಹೇಳಿದರು.