ಕರ್ನಾಟಕ

karnataka

ETV Bharat / state

ಕಿರುತೆರೆಯಿಂದ ನಟ‌ ಅನಿರುದ್ದ್ ಬ್ಯಾನ್ ವಿಚಾರ ಸುಖಾಂತ್ಯ - ಈಟಿವಿ ಭಾರತ ಕನ್ನಡ

ನಟ ಅನಿರುದ್ಧ್​​ ವಿರುದ್ಧ ಕಿರುತೆರೆ ಮೇಲೆ ಹಾಕಲಾಗಿದ್ದ ನಿಷೇಧ ವಿಚಾರ ಸುಖಾಂತ್ಯ ಕಂಡಿದ್ದು, ಈ ಮೂಲಕ ಅನಿರುದ್ಧ ಮತ್ತೆ ಕಿರುತೆರೆ ಮೇಲೆ ಜೊತೆಯಾಗಲಿದ್ದಾರೆ.

actor-anirudh-ban-lifted-by-serial-producer-association
ಕಿರುತೆರೆಯಿಂದ ನಟ‌ ಅನಿರುದ್ದ್ ಬ್ಯಾನ್ ವಿಚಾರ ಸುಖಾಂತ್ಯ

By

Published : Dec 10, 2022, 10:00 PM IST

ಕಿರುತೆರೆ ನಿರ್ಮಾಪಕರ ಸಂಘವು ನಟ ಅನಿರುದ್ಧ್ ವಿರುದ್ಧ ತೆಗೆದುಕೊಂಡು ಕ್ರಮದ ಕುರಿತಾಗಿ ಇಂದು ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಕರೆಯಲಾಗಿತ್ತು. ಆದರೆ ಫಿಲ್ಮ್ ಚೇಂಬರ್ ನಲ್ಲಿ ನಡೆಯಬೇಕಿದ್ದ ಸಭೆ, ಚಾಮರಾಜಪೇಟೆಯ ಕ್ಲಬ್ ನಲ್ಲಿ ನಡೆಸಲಾಯಿತು. ಸಭೆಗೆ ಅನಿರುದ್ಧ್ ಮಾತ್ರ ಬಂದಿದ್ದರು. ನಿರ್ದೇಶಕ ಹಾಗು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಗೈರಾಗಿದ್ದರು.

ಇನ್ನು, ಈ ಸಭೆಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್, ಕರ್ನಾಟಕ ಟೆಲಿವಿಷನ್ ಸಂಘದ ನಿರ್ಮಾಪಕರು, ನಟ ಅನಿರುದ್ಧ್ ಹಾಗು ಜೊತೆ ಜೊತೆಯಲ್ಲಿ ಸೀರಿಯಲ್ ನಿರ್ಮಾಪಕ ಆರೂರು ಜಗದೀಶ್, ನಿರ್ದೇಶಕ ಪಿ ಶೇಷಾದ್ರಿ ಹಾಗು ಕೆಲ ಫಿಲ್ಮ್ ಚೇಂಬರ್ ಪದಾಧಿಕಾರಿಗಳು ಭಾಗಿಯಾಗಿದ್ದರು.

ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ನಟ ಅನಿರುದ್ಧ್ ಹಾಗು ಜೊತೆ ಜೊತೆಯಲ್ಲಿ ‌ಸೀರಿಯಲ್ ನ ನಿರ್ಮಾಪಕ ಆರೂರು ಜಗದೀಶ್ ಅವರು ಮುಖಾಮುಖಿ ಚರ್ಚೆ ಮಾಡಿ ಕೊನೆಗೂ ಸಮಸ್ಯೆಗೆ ಇತಿಶ್ರೀ ಹಾಡಿದರು. ಕಿರುತೆರೆ ಪರವಾಗಿ ಮಾತನಾಡಿದ‌ ಹಿರಿಯ ನಿರ್ದೇಶಕ ಪಿ.ಶೇಷಾದ್ರಿ, ನಾವೆಲ್ಲ ಒಮ್ಮತದಿಂದ ಒಂದು ನಿರ್ಧಾರಕ್ಕೆ ಬಂದಿದ್ದೀವಿ‌‌. ಇಂಡಸ್ಟ್ರಿಯಲ್ಲಿ ಯಾರು ಯಾರನ್ನು ನಿಷೇಧಿಸಲು ಆಗಲ್ಲ. ಎಲ್ಲಾ ವಿವಾದ ಇತ್ಯರ್ಥ ಆಗಿದೆ. ಅನಿರುದ್ದ್ ಅವರು ಹೊಸ ಧಾರವಾಹಿಯಲ್ಲಿ ನಟಿಸುತ್ತಾರೆ ಎಂದು ಹೇಳಿದರು. ಈ ಮೂಲಕ ಅನಿರುದ್ದ್ ಅವರನ್ನು ಕಿರುತೆರೆಯಿಂದ ನಿಷೇಧಿಸುವ ವಿಚಾರವನ್ನು ಕೈಬಿಡಲಾಗಿದೆ ಎಂದು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಈ‌ ಸಂದರ್ಭದಲ್ಲಿ ಮಾತನಾಡಿದ ನಟ ಅನಿರುದ್ದ್, ಜೊತೆ ಜೊತೆಯಲ್ಲಿ ಧಾರವಾಹಿಯ ಈ ಘಟನೆಯಿಂದ ಅಭಿಮಾನಿಗಳಿಗೆ ಬೇಸರ ಆಗಿದೆ. ಹೀಗಾಗಿ ನಾನು ಅಭಿಮಾನಿಗಳಲ್ಲಿ ನಾನು ಕ್ಷಮೆ ಕೇಳುತ್ತೇನೆ. ಇಂತಹ ಘಟನೆ ನಡೆಯಬಾರದಿತ್ತು ಎಂದು ಜೊತೆ ಜೊತೆಯಲಿ ಧಾರವಾಹಿಯ ನಿರ್ಮಾಪಕ ಆರೂರು ಜಗದೀಶ್ ಹೆಗಲ ಮೇಲೆ ಕೈಹಾಕಿ ಅನಿರುದ್ಧ್​ ಭಾವುಕರಾದರು‌.

ಇನ್ನು ಅನಿರುದ್ದ್ ಭಾವುಕರಾಗಿ ಆರೂರು ಜಗದೀಶ್ ಮೇಲೆ ಕೈ ಹಾಕಿ ಭಾವುಕರಾಗುತ್ತಿದ್ದಂತೆ, ಅಭಿಮಾನಿಗಳಲ್ಲಿ ಆರೂರು ಜಗದೀಶ್ ಕೂಡ ಕ್ಷಮೆಯನ್ನು ಕೇಳಿದರು. ಈ ಮೂಲಕ ನಟ ಅನಿರುದ್ಧ್ ಅವರ ಮೇಲೆ ಹೇರಲಾಗಿದ್ದ ನಿಷೇಧ ಕ್ರಮವನ್ನು ಕೈಬಿಡಲಾಗಿದೆ.

ಇದನ್ನೂ ಓದಿ :"ನಾನು ಅವರನ್ನು ಪ್ರೀತಿಸುತ್ತೇನೆ, ಉಳಿದದ್ದು ಅವರಿಗೆ ಬಿಟ್ಟದ್ದು": ಟೀಕೆಗೆ ರಶ್ಮಿಕಾ ರಿಯಾಕ್ಷನ್

ABOUT THE AUTHOR

...view details