ಬೆಂಗಳೂರು:ರಾಜ್ಯ ಸರ್ಕಾರದ ಆಡಳಿತ ವೈಖರಿ, ವಿರೋಧ ಪಕ್ಷಗಳ ಶಾಸಕರ ರೆಸಾರ್ಟ್ ವಾಸ್ತವ್ಯ ವಿರೋಧಿಸಿ, ಕಾಂಗ್ರೆಸ್ ಶಾಸಕರು ತಂಗಿರುವ ತಾಜ್ ವಿವಾಂತ ಹೋಟೆಲ್ ಮುಂದೆ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾದ್ರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಬಂದಿಸಿದ್ರು.
ರೆಸಾರ್ಟ್ ರಾಜಕಾರಣದ ವಿರುದ್ಧ ಪ್ರತಿಭಟನೆ; ಬಂಧನ - undefined
ತಾಜ್ ವಿವಾಂತ ಹೋಟೆಲ್ ಗೇಟ್ ಬಳಿ ಸಗಣಿ ಹಾಕಿ ವಿನೂತನ ಪ್ರತಿಭಟನೆಗೆ ಮುಂದಾದ ಕನ್ನಡ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ರೆಸಾರ್ಟ್
ತಾಜ್ ವಿವಾಂತ ಹೋಟೆಲ್ ಗೇಟ್ ಬಳಿ ಸಗಣಿ ಹಾಕುವ ಮೂಲಕ ವಿನೂತನ ಪ್ರತಿಭಟನೆಗೆ ಸಂಘಟನೆ ಅಧ್ಯಕ್ಷ ನಾಗೇಶ್ ನೇತೃತ್ವದಲ್ಲಿ ಸಿದ್ಧತೆ ನಡೆಸಲಾಗಿತ್ತು. ಆದರೆ ಪ್ರತಿಭಟನೆ ಆರಂಭಕ್ಕೂ ಮುನ್ನವೇ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಹೀಗಾಗಿ ಪ್ರತಿಭಟನೆ ನಡೆಯಲಿಲ್ಲ.
ಪ್ರತಿಭಟನೆಗೆ ಮುಂದಾದವರ ಬಂಧನ
ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ಪ್ರತಿಭಟನಾಕಾರ ಲಿಂಗರಾಜಗೌಡ, ಶಾಸಕರು ಸಚಿವರು ರೆಸಾರ್ಟ್ನಲ್ಲಿರುವ ಬದಲು ವಿಧಾನಸೌಧ ಅಥವಾ ತಮ್ಮ ತಮ್ಮ ಕ್ಷೇತ್ರಗಳಿಗೆ ಮರಳಬೇಕು ಎಂದು ಆಗ್ರಹಿಸಿದರು.