ಕರ್ನಾಟಕ

karnataka

ETV Bharat / state

ಕೋವಿಡ್ ವ್ಯಾಕ್ಸಿನ್​ ಬ್ಲಾಕ್ ಮಾರ್ಕೆಟ್ ಮಾರಾಟಕ್ಕೆ ಬ್ರೇಕ್ ಹಾಕಲು ಕ್ರಮ : ಸಚಿವ ಬೊಮ್ಮಾಯಿ

ಕೋವಿಡ್ ನಿಯಂತ್ರಣ ಸಂಬಂಧ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ಕ್ರಮಗಳ ಅನುಷ್ಠಾನ ಮಾಡಲು ಗೃಹ ಇಲಾಖೆ ಕ್ರಮಕೈಗೊಂಡಿದೆ. ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಟಾಸ್ಕ್‌ಪೋರ್ಸ್ ಎಲ್ಲವನ್ನು ನೋಡಿಕೊಳ್ಳಲಿದೆ. ಟೆಸ್ಟ್ ಮಾಡೋದನ್ನ ಆರೋಗ್ಯ ಇಲಾಖೆ ಮಾಡುತ್ತದೆ. ಉಳಿದ ಕೆಲಸ ನಮ್ಮ ಇಲಾಖೆ ಮಾಡಲಿದೆ..

basavaraja-bommai
ಬಸವರಾಜ ಬೊಮ್ಮಾಯಿ

By

Published : Apr 16, 2021, 4:15 PM IST

ಬೆಂಗಳೂರು :ವ್ಯಾಕ್ಸಿನೇಶನ್ ಬ್ಲಾಕ್ ಮಾರ್ಕೆಟ್ ಮಾರಾಟಕ್ಕೆ ಬ್ರೇಕ್ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೋವಿಡ್ ನಿಯಂತ್ರಣ ಮತ್ತು ರೆಮಿಡಿಸಿವಿರ್ ಚುಚ್ಚು ಮದ್ದು ಕಳ್ಳಸಂತೆಯಲ್ಲಿ ಮಾರಾಟ ಆಗದಂತೆ ತಡೆಯುವ ಕುರಿತು ವಿಧಾನಸೌಧದಲ್ಲಿ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರೆಮಿಡಿಸಿವಿರ್ ಕೊರತೆ ಬಗ್ಗೆ ಚರ್ಚೆ ಆಗುತ್ತಿದೆ.

ಇದು ಮಹತ್ವದ ಡ್ರಗ್. ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಇದನ್ನ ಗಂಭೀರವಾಗಿ ಪರಿಗಣಿಸಿ, ಟೋಟಲ್ ಸ್ಟಾಕ್, ವಿತರಣೆ, ಆಸ್ಪತ್ರೆಯನ್ನು ಚೆಕ್ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ರೆಮಿಡಿಸಿವಿರ್ ಔಷಧ ಉತ್ಪಾದನೆ ಕಡಿಮೆ ಆಗಿರುವುದರಿಂದ ಸಮಸ್ಯೆ ಆಗಿರಬಹುದು. ಮುಂದಿನ ದಿನಗಳಲ್ಲಿ ಉತ್ಪಾದನೆ ಹೆಚ್ಚಾಗಲಿದೆ. ಈ ಔಷಧಿ ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬಂದರೆ ಅವರ ವಿರುದ್ಧವೂ ಪ್ರಕರಣ ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಗಡಿ ಭಾಗದಲ್ಲಿ ಮತ್ತಷ್ಟು ಬಿಗಿ :ರಾಜ್ಯದ ಗಡಿ ಭಾಗಗಳಲ್ಲಿ ಮತ್ತಷ್ಟು ಬಿಗಿ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ. ಹೊರಗಡೆಯಿಂದ ಬಂದವರಿಗೆ ಆರ್​ಟಿಪಿಸಿಆರ್ ರಿಪೋರ್ಟ್ ಚೆಕ್ ಮಾಡುವುದು, ನೆಗೆಟಿವ್ ಇದ್ದವರಿಗೆ ಮಾತ್ರ ರಾಜ್ಯದೊಳಗೆ ಬಿಡುವ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಆಗಿದೆ ಎಂದರು.

ನೈಟ್ ಕರ್ಫ್ಯೂ ಯಶಸ್ವಿಯಾಗಿದೆ. ಕೋವಿಡ್ ನಿಯಮ ಜಾರಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಮಾಸ್ಕ್ ಹಾಕದವರಿಗೆ ದಂಡ ಹಾಕಲಾಗಿದೆ. ಈಗಾಗಲೇ ಸುಮಾರು 65 ಸಾವಿರ ಮಂದಿಗೆ ದಂಡ ಹಾಕಲಾಗಿದೆ ಎಂದರು.

ಟೆಸ್ಟ್​​ಗೆ ಸೂಚನೆ : ರೈಲ್ವೆ ಸ್ಟೇಷನ್, ಬಸ್ ಸ್ಟಾಂಡ್​ನಲ್ಲಿ ಥರ್ಮಲ್ ಸ್ಕ್ಯಾನ್, ಸ್ವ್ಯಾಬ್ ಟೆಸ್ಟ್ ಮಾಡಲು ಸೂಚಿಸಲಾಗಿದೆ. ಮೆಟ್ರೋ ಕಂಟೇನ್​ಮೆಂಟ್​ ಇನ್ನೂ‌ ಮಾಡಿಲ್ಲ. ಕಳೆದ ಬಾರಿ ನಾವು ಮಾಡಿದ್ದೆವು. ಇವತ್ತಿನ ಸಭೆಯಲ್ಲಿ ಮತ್ತೆ ಕಂಟೇನ್​ಮೆಂಟ್​ ಮಾಡುವುದಕ್ಕೆ ನಿರ್ಧರಿಸಿದ್ದೇವೆ ಎಂದರು.

ಪೊಲೀಸ್​ ಇಲಾಖೆಯಲ್ಲಿ 30 ಜನರಿಗೆ ಕೋವಿಡ್ ಬಂದಿದೆ. 450 ಮಂದಿ ಕುಟುಂಬಸ್ಥರಿಗೆ ಸೋಂಕು ತಗುಲಿದೆ. ಅವರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಪೊಲೀಸ್​ ಸಿಬ್ಬಂದಿಗೆ ವ್ಯಾಕ್ಸಿನೇಷನ್ ಹಾಕಲಾಗುತ್ತದೆ. ಆಸ್ಪತ್ರೆಯಲ್ಲಿ ಪೊಲೀಸರ ದಾಖಲು, ಚಿಕಿತ್ಸೆಗೆ ಮಾನಿಟರ್ ಮಾಡಲು ಎಡಿಜಿಪಿ ಅಧಿಕಾರಿಯೊಬ್ಬರನ್ನು ನೇಮಿಸುತ್ತೇವೆ. ಅವರಿಗೆ ಫೇಸ್ ಶೀಲ್ಡ್, ಮಾಸ್ಕ್, ಸ್ಯಾನಿಟೈಸರ್ ಕೊಡಲು ತೀರ್ಮಾನಿಸಲಾಗಿದೆ ಎಂದರು.

ಕೋವಿಡ್ ನಿಯಂತ್ರಣ ಸಂಬಂಧ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ಕ್ರಮಗಳ ಅನುಷ್ಠಾನ ಮಾಡಲು ಗೃಹ ಇಲಾಖೆ ಕ್ರಮಕೈಗೊಂಡಿದೆ. ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ಟಾಸ್ಕ್‌ಪೋರ್ಸ್ ಎಲ್ಲವನ್ನು ನೋಡಿಕೊಳ್ಳಲಿದೆ. ಟೆಸ್ಟ್ ಮಾಡೋದನ್ನ ಆರೋಗ್ಯ ಇಲಾಖೆ ಮಾಡುತ್ತದೆ. ಉಳಿದ ಕೆಲಸ ನಮ್ಮ ಇಲಾಖೆ ಮಾಡಲಿದೆ ಎಂದರು.

ಓದಿ:144 ಸೆಕ್ಷನ್ ವಿಸ್ತರಣೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಕಮೀಷನರ್ ಸಭೆ

ABOUT THE AUTHOR

...view details