ಬೆಂಗಳೂರು: ನಗರದಲ್ಲಿ ಎರಡು ದಿನ ಸುರಿದ ಭಾರೀ ಮಳೆಗೆ ಹಲವಾರು ಮನೆಗಳಿಗೆ ನೀರು ನುಗ್ಗಿವೆ. ಲೇಔಟ್ಗಳು ಜಲಾವೃತಗೊಂಡಿವೆ. ನಗರದ ರಾಜಕಾಲುವೆಗಳ ಸಾಮರ್ಥ್ಯ ಹೆಚ್ಚಿಸುವುದರ ಜೊತೆಗೆ ಸರ್ಕಾರ ಏನೇನು ಕ್ರಮ ಕೈಗೊಳ್ಳಲಿದೆ ಎಂಬುದರ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ್ ಮಾಹಿತಿ ನೀಡಿದರು.
ಪ್ರವಾಹ ಭೀತಿ ಉಂಟಾಗದಂತೆ ನಗರದ ರಾಜಕಾಲುವೆಗಳ ವಿಸ್ತರಣೆಗೆ ಕ್ರಮ: ಅಶ್ವಥ್ ನಾರಾಯಣ್ - bangalore rain news
ಬೆಂಗಳೂರು ಕಾಂಕ್ರೀಟ್ ಕಾಡಾಗಿರೋದ್ರಿಂದ ನೆರೆ, ಪ್ರವಾಹ ಸ್ಥಿತಿ ಉಂಟಾಗುವುದು ಸಾಮಾನ್ಯ. ಇದನ್ನು ತಡೆಗಟ್ಟಲು ನಗರದ ಹಲವೆಡೆ ರೀಚಾರ್ಜಿಂಗ್ ಪಿಟ್ಸ್ ಮಾಡಲಾಗುತ್ತಿದೆ. ಎಲ್ಲೆಲ್ಲಿ ಮಳೆ ಬೀಳುತ್ತೋ ಅಲ್ಲಲ್ಲಿ ಇಂಗುಗುಂಡಿ ಮಾಡಲಾಗುತ್ತದೆ ಎಂದು ಅಶ್ವಥ್ ನಾರಾಯಣ್ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಳೆಹಾನಿಯಾದ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಪಾಲಿಕೆ ಆಯುಕ್ತರು ಪರಿಶೀಲನೆ ಮಾಡಿದ್ದಾರೆ. ಬೆಂಗಳೂರು ಕಾಂಕ್ರೀಟ್ ಕಾಡಾಗಿರೋದ್ರಿಂದ ನೆರೆ, ಪ್ರವಾಹ ಸ್ಥಿತಿ ಉಂಟಾಗುವುದು ಸಾಮಾನ್ಯ. ಇದನ್ನು ತಡೆಗಟ್ಟಲು ನಗರದ ಹಲವೆಡೆ ರೀಚಾರ್ಜಿಂಗ್ ಪಿಟ್ಸ್ ಮಾಡಲಾಗುತ್ತಿದೆ. ಎಲ್ಲೆಲ್ಲಿ ಮಳೆ ಬೀಳುತ್ತೋ ಅಲ್ಲಲ್ಲಿ ಇಂಗುಗುಂಡಿ ಮಾಡಲಾಗುತ್ತದೆ ಎಂದು ಹೇಳಿದರು.
ನಗರದಲ್ಲಿ ಮಳೆ ನೀರು ಕೊಯ್ಲು ಮಾಡಲು ಹೆಚ್ಚಿನ ಒತ್ತು ನೀಡಲಾಗ್ತದೆ. ಮಳೆನೀರು ಹರಿದುಹೋಗುತ್ತಿರುವ ರಾಜಕಾಲುವೆಗಳ ಪ್ರಮಾಣ, ಅವುಗಳ ಕೆಪಾಸಿಟಿ ಸಾಲುತ್ತಿಲ್ಲ. ಇದನ್ನು ಹೆಚ್ಚಿಸಬೇಕಿದೆ. ಅದರ ಅಡೆತಡೆಗಳನ್ನು ನೋಡಿ, ತೆರವು ಮಾಡ್ಬೇಕಾಗಿದೆ. ನೆರೆ, ಮಳೆ ಎದುರಿಸಲು ಸಜ್ಜಾಗುತ್ತೇವೆ ಎಂದರು.