ಕರ್ನಾಟಕ

karnataka

ETV Bharat / state

ಪೋಸ್ಟ್ ಮಾಡಿದವರು, ಗಲಭೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು : ಖಾದರ್ ಒತ್ತಾಯ - Bangalore DJ halli riot case News

ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಿಂದ ಬೇಸರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಹಾಗಂತ ದಾಳಿ ಮಾಡುವುದು ಸಹ ಸರಿಯಲ್ಲ ಎಂದು ಮಾಜಿ ಸಚಿವ ಯು ಟಿ ಖಾದರ್​ ಹೇಳಿದ್ದಾರೆ.

ಮಾಜಿ ಸಚಿವ ಯು.ಟಿ ಖಾದರ್
ಮಾಜಿ ಸಚಿವ ಯು.ಟಿ ಖಾದರ್

By

Published : Aug 12, 2020, 7:05 AM IST

ಬೆಂಗಳೂರು: ಗಲಭೆ ಪ್ರಕರಣದಲ್ಲಿ ಯಾರೆಲ್ಲಾ ತಪ್ಪಿತಸ್ಥರಿದ್ದಾರೋ ಅವರೆಲ್ಲರ ವಿರುದ್ಧವೂ ಕಾನೂನು ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಿಂದ ಬೇಸರವಾಗಿದೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗಂತ ದಾಳಿ ಮಾಡಿದ್ದೂ ಸರಿಯಲ್ಲ. ಯಾರೂ ಕಾನೂನು ಕೈಗೆತ್ತುಕೊಳ್ಳಬಾರದು. ಅಖಂಡ ಶ್ರೀನಿವಾಸ ಮೂರ್ತಿ ಜಾತ್ಯತೀತ ವ್ಯಕ್ತಿ, ಅವರ ಸಂಬಂಧಿಕರು ಮಾಡಿದ್ದಕ್ಕೆ‌ ಈ ರೀತಿ ಶಾಸಕರ ಮನೆಗೆ ದಾಳಿ ಮಾಡುವುದು ಸರಿಯಲ್ಲ, ಪೊಲೀಸರ ಮೇಲೆಯೂ ದಾಳಿ ನಡೆಸಿದ್ದು ಸರಿಯಲ್ಲ. ಈ ರೀತಿ ಪೋಸ್ಟ್ ಮಾಡಿದವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕಾನೂನು ಕೈಗೆತ್ತಿಕೊಂಡವರ ವಿರುದ್ಧವೂ ಕ್ರಮ ಅಗತ್ಯ, ಯಾರು ಇದರಲ್ಲಿ ಭಾಗಿಯಾಗಿದ್ದಾರೋ ಅವರು ದುಷ್ಕರ್ಮಿಗಳು ಅವರ ವಿರುದ್ಧ ಕ್ರಮ ಅಗತ್ಯ ಎಂದು ಮಾಜಿ ಸಚಿವ ಯು. ಟಿ. ಖಾದರ್​ ಸರ್ಕಾರವನ್ನ ಒತ್ತಾಯಿಸಿದ್ದಾರೆ.

ಇಂಟಲಿಜೆನ್ಸ್ ಯಾಕೆ ವಿಫಲವಾಯಿತು ಎಂದು ಸರ್ಕಾರವೇ ಹೇಳಬೇಕು. ಹಿಂಸೆ ಬೇಡ, ಅದು ಸಮಸ್ಯೆಗೆ ಪರಿಹಾರವಲ್ಲ, ಕಾನೂನು ಇದೆ. ತಪ್ಪಿತಸ್ಥರ ವಿರುದ್ಧ ಕಠಿಣ‌ ಕ್ರಮ ಕೈಗೊಳ್ಳಲಿದೆ ಹಾಗಾಗಿ ಎಲ್ಲರೂ ಶಾಂತಿಗೆ‌ ಸಹಕಾರ ನೀಡಬೇಕು ಎಂದು ಖಾದರ್ ಮನವಿ ಮಾಡಿದ್ದಾರೆ.

ABOUT THE AUTHOR

...view details