ಕರ್ನಾಟಕ

karnataka

ETV Bharat / state

ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಪೊಲೀಸರ ಹದ್ದಿನಕಣ್ಣು; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಡಿಜಿ ಅಲೋಕ್ ಮೋಹನ್ ಸೂಚನೆ

ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಜರುಗಿಸುವಂತೆ ಡಿಜಿ ಅಲೋಕ್ ಮೋಹನ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಡಿಜಿ ಅಲೋಕ್ ಮೋಹನ್
ಡಿಜಿ ಅಲೋಕ್ ಮೋಹನ್

By

Published : Jun 22, 2023, 5:38 PM IST

ಸುಳ್ಳು-ಪೊಳ್ಳುಗಳನ್ನೆಲ್ಲ ಪೋಸ್ಟ್ ಮಾಡುವವರ ಮೇಲೆ ಕ್ರಮಕ್ಕೆ ಡಿಜಿ ಸೂಚನೆ

ಬೆಂಗಳೂರು : ನೀವೇನಾದರೂ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಷಿವ್​ ಆಗಿದ್ದೀರಾ..!? ಅದ್ರಲ್ಲೂ ಯಾರೋ ಹೇಳಿದ್ದು ಕೇಳಿದ್ದನ್ನು ಯೋಚನೆ ಮಾಡದೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದೀರಾ. ಹಾಗಾದರೇ ನೀವು ಮಿಸ್ ಮಾಡ್ಡೆ ಈ ವಿಚಾರವನ್ನು ತಿಳಿದುಕೊಳ್ಳಲೇಬೇಕು. ಇದೀಗ ಏನಂದರೇ ಸುಳ್ಳು-ಪೊಳ್ಳುಗಳನ್ನೆಲ್ಲ ಪೋಸ್ಟ್ ಮಾಡೊರ ಮೇಲೆ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಈ ಬಗ್ಗೆ ವಿಶೇಷ ಗಮನ ಹರಿಸಿ ಖುದ್ದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಇಂದು ಫೀಲ್ಡಿಗಿಳಿದಿದ್ದಾರೆ. ಅಷ್ಟೇ ಅಲ್ಲದೇ ಸಿಟಿ ಕಮಿಷನರ್ ಹಾಗು ಎಲ್ಲ ಡಿಸಿಪಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.

ಇಂದು ಆಯುಕ್ತರ ಕಚೇರಿಯಲ್ಲಿ ನಗರ ಪೊಲೀಸ್ ಆಯುಕ್ತರು ಸೇರಿದಂತೆ ನಗರದ ಎಲ್ಲ ವಿಭಾಗದ ಡಿಸಿಪಿಗಳ ಜೊತೆ ಡಿಜಿ ಅಲೋಕ್ ಮೋಹನ್ ಸಭೆ ನಡೆಸಿದರು. ಸಭೆಯಲ್ಲಿ ಸಿಟಿ ಕಮಿಷನರ್ ದಯಾನಂದ್, ಅಡಿಷನಲ್ ಕಮಿಷನರ್ ಗಳಾದ ಸತೀಶ್ ಕುಮಾರ್​, ರಮಣ್‌ಗುಪ್ತಾ, ಸಿಸಿಬಿ ಜಾಯಿಂಟ್ ಕಮಿಷನರ್ ಡಾ. ಎಸ್. ಡಿ. ಶರಣಪ್ಪ, ಟ್ರಾಫಿಕ್‌ ಕಮಿಷನರ್ ಎಂ.ಎನ್. ಅನುಚೇತ್ ಸೇರಿ‌ ನಗರದ ಎಲ್ಲಾ ವಿಭಾಗದ ಡಿಸಿಪಿಗಳು ಭಾಗಿಯಾಗಿದ್ದರು. ಕಳೆದ ಜೂನ್ 25 ರಂದು ಮೊದಲ ಬಾರಿಗೆ ಬೆಂಗಳೂರು ಸಿಟಿ ಹೈಯರ್ ಪೊಲೀಸ್ ಅಧಿಕಾರಿಗಳ ಜೊತೆ ಡಿಜಿ ಅಲೋಕ್ ಮೋಹನ್ ಮೀಟಿಂಗ್ ಮಾಡಿದ್ದರು.

ಇಂದು ಎರಡನೇ ಬಾರಿಗೆ ಸಭೆ ನಡೆಸಿ ಕೆಲ‌ ಮಹತ್ವದ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು. ಬಹುಮುಖ್ಯವಾಗಿ ಸಭೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸೋರನ್ನು ಪತ್ತೆ ಹಚ್ಚಬೇಕು. ಸೋಷಿಯಲ್ ಮೀಡಿಯಾದಲ್ಲಿ ನಕಲಿ ಅಕೌಂಟ್ ಗಳನ್ನ ತೆರೆದು ಸರ್ಕಾರದ ಯೋಜನೆಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಯತ್ನ ನಡೆಸಲಾಗುತ್ತಿದೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.

ಅಪರಾಧ ಪ್ರಕರಣಗಳನ್ನು ತಡೆಯುವುದಕ್ಕೆ ಡಿಸಿಪಿಗಳು ಡೇ ಬೀಟ್ ಹಾಗೂ ನೈಟ್ ಬೀಟ್ ವ್ಯವಸ್ಥೆಯನ್ನ ಸರಿಯಾಗಿ ಪಾಲನೆ ಮಾಡಬೇಕು. ಹಿರಿಯ ಅಧಿಕಾರಿಗಳ ಮೊಬೈಲ್ ಸಂಖ್ಯೆ ಠಾಣೆಯಲ್ಲಿ ಹಾಕಿರಬೇಕು. ಹಿರಿಯ ಅಧಿಕಾರಿಗಳು ಕೇವಲ ಎಸಿಪಿ‌ ಇನ್ಸ್'ಪೆಕ್ಟರ್ ಗಳನ್ನು ಮಾತ್ರವಲ್ಲದೇ ಠಾಣೆಗಳಿಗೆ ಭೇಟಿಕೊಟ್ಟು ಸಾರ್ವಜನಿಕರಿಂದ ಅಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆಯಬೇಕು. ನಗರದಲ್ಲಿ ರೌಡಿಸಂ ಕಂಟ್ರೋಲ್ ಆಗಬೇಕು. ಆ್ಯಕ್ಟಿವ್​ ಇರುವ ರೌಡಿಗಳ ಮೇಲೆ ನಿಗಾ ಇಟ್ಟು ಸಿಆರ್​ಪಿಸಿ 110 ಸೆಕ್ಷನ್ ಅಡಿ ಬಾಂಡ್ ಬರೆಸಿ ವಾರ್ನ್ ಮಾಡಬೇಕೆಂದು ಸೂಚಿಸಿದರು.

ನಗರದಲ್ಲಿ ಸದ್ಯ ದಾಖಲಾಗಿರುವ ಜಾತಿನಿಂದನೆ ಪ್ರಕರಣಗಳೆಷ್ಟು, ಕೇಸ್ ದಾಖಲಾಗಿ ಚಾರ್ಜ್ ಶೀಟ್ ಆಗದೇ ಪೆಂಡಿಂಗ್ ಇರುವ ಕೇಸ್ ಗಳ ಸಂಖ್ಯೆಯಷ್ಟು, ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಸೈಬರ್ ಕ್ರೈಂ ಪ್ರಕರಣಗಳನ್ನ ತ್ವರಿತಗತಿಯಲ್ಲಿ ಪತ್ತೆ ಹಚ್ಚಬೇಕು. ಈ ಮೂಲಕ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುವಂತಹ ಪೋಸ್ಟ್ ಗಳ ಮೇಲೆ ನಿಗಾ ಇಡಲು ಡಿಜಿ ಅಲೋಕ್​ ಕುಮಾರ್​​ ಸೂಚಿಸಿದ್ದಾರೆ.

ಇದನ್ನೂ ಓದಿ :ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ: ಎಸ್ಪಿಗಳಿಗೆ ಡಿಜಿ ತಾಕೀತು

ABOUT THE AUTHOR

...view details