ಬೆಂಗಳೂರು: ನಕಲಿ ಆಧಾರ್ ಕಾರ್ಡ್, ಗುರುತಿನ ಚೀಟಿ, ಪಾಸ್‌ಪೋರ್ಟ್ ಸೃಷ್ಟಿಸಿಕೊಂಡು ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗೆ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.
ನಕಲಿ ದಾಖಲೆ ಸೃಷ್ಟಿಸಿ ಬೆಂಗಳೂರಲ್ಲೇ ಠಿಕಾಣಿ... ಬಾಂಗ್ಲಾ ಪ್ರಜೆಯನ್ನು ಜೈಲಿಗಟ್ಟಿದ ಕೋರ್ಟ್ - undefined
ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬೆಂಗಳೂರಲ್ಲಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ ಪ್ರಜೆಗೆ ಎಸಿಎಂಎಂ ನ್ಯಾಯಾಲಯ ಮೂರು ವರ್ಷ ಜೈಲು ಹಾಗೂ 5 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಬಾಂಗ್ಲಾದೇಶದ ನಹೀಮ್ ಬಂಧಿತ ಆರೋಪಿ. ತಾನು ಭಾರತೀಯ ಎಂಬ ಸುಳ್ಳು ಮಾಹಿತಿ ನೀಡಿ ನಗರದಲ್ಲಿ ನೆಲೆಸಿದ್ದ. ಅದಕ್ಕೆ ಪೂರಕ ಎಂಬಂತೆ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾಸ್‌ಪೋರ್ಟ್‌ಗಳನ್ನು ಸೃಷ್ಟಿಸಿಕೊಂಡಿದ್ದ.
ನಹೀಮ್ ವಿರುದ್ಧ ಐಪಿಸಿ ಸೆಕ್ಷನ್ 468, ಸೆಕ್ಷನ್ 471, ಸೆಕ್ಷನ್ 420 ಹಾಗೂ ಪಾಸ್‌ಪೋರ್ಟ್ ಕಾಯ್ದೆ ಕಲಂ 12ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್ಆರ್ಆರ್ಒ ಅಧಿಕಾರಿಗಳು ನೀಡಿದ ಸುಳಿವು ಆಧರಿಸಿ 2017ರಲ್ಲಿ ನಹೀಮ್ ಬಂಧಿಸಿದ್ದ ಹಲಸೂರು ಠಾಣೆ ಪೊಲೀಸರು ವಿಚಾರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 10ನೇ ಎಸಿಎಂಎಂ ಕೋರ್ಟ್ ಆರೋಪಿಗೆ 3 ವರ್ಷ ಜೈಲು ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.