ಕರ್ನಾಟಕ

karnataka

ETV Bharat / state

ರಾಘವೇಂದ್ರ ಶೆಟ್ಟಿಯಿಂದ ಆ್ಯಸಿಡ್ ಬೆದರಿಕೆ: ಡಿ‌.ರೂಪಾ ಗಂಭೀರ ಆರೋಪ - ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ

ಡಿ.ರೂಪಾ ಮಾಡಿರುವ ಸುದೀರ್ಘ 6 ಪುಟಗಳ ದೂರಿಗೆ ಪ್ರತಿಯಾಗಿ ಸ್ಪಷ್ಟನೆ ನೀಡಿದ್ದ ಬೇಳೂರು ರಾಘವೇಂದ್ರ ಶೆಟ್ಟಿ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿ ರೂಪಾರ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದರು. ಇದರ ಬೆನ್ನಲ್ಲೆ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ರಾಘವೇಂದ್ರ ಶೆಟ್ಟಿ ಹಾಗೂ ರೂಪಾ ಮೌದ್ಗಿಲ್ ನಡುವೆ ನಡೆದಿರುವ ಮಾತಿನ ಜಟಾಪಟಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಾಘವೇಂದ್ರ ಶೆಟ್ಟಿಯಿಂದ ಡಿ ರೂಪಾಗೆ ಆ್ಯಸಿಡ್ ಬೆದರಿಕೆ
ರಾಘವೇಂದ್ರ ಶೆಟ್ಟಿಯಿಂದ ಡಿ ರೂಪಾಗೆ ಆ್ಯಸಿಡ್ ಬೆದರಿಕೆ

By

Published : Jun 2, 2022, 7:58 PM IST

ಬೆಂಗಳೂರು: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್ ನಡುವಿನ ಸಮರ ಮುಂದುವರೆದಿದೆ. ಡಿ.ರೂಪಾ ಮಾಡಿರುವ ಸುದೀರ್ಘ 6 ಪುಟಗಳ ದೂರಿಗೆ ಪ್ರತಿಯಾಗಿ ಸ್ಪಷ್ಟನೆ ನೀಡಿದ್ದ ಬೇಳೂರು ರಾಘವೇಂದ್ರ ಶೆಟ್ಟಿ ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿ ರೂಪಾರ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದರು.

ಇದರ ಬೆನ್ನಲ್ಲೆ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ರಾಘವೇಂದ್ರ ಶೆಟ್ಟಿ ಹಾಗೂ ರೂಪಾ ಮೌದ್ಗಿಲ್ ನಡುವೆ ನಡೆದಿರುವ ಮಾತಿನ ಜಟಾಪಟಿಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಸಭೆಯಲ್ಲಿ ರಾಘವೇಂದ್ರ ಶೆಟ್ಟಿ ತಾನು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡರೇ ರೂಪಾ ಕಾರಣ ಎಂದು ಹೇಳುವ ಮೂಲಕ ಬೆದರಿಕೆ ಒಡ್ಡಿದ್ದಾರೆ. ಅದಲ್ಲದೇ ತಮ್ಮ ಮುಖಕ್ಕೆ ಆ್ಯಸಿಡ್ ಎರಚಿಸುವ ಬೆದರಿಕೆ ಹಾಕಿದ್ದಾರೆ ಎಂದು ರೂಪಾ ಮೌದ್ಗಿಲ್ ಗಂಭೀರವಾಗಿ ಆರೋಪಿಸಿದ್ದಾರೆ.

ಆತ್ಮಹತ್ಯೆಯ ಬೆದರಿಕೆ ಒಡ್ಡುವುದು ಐಪಿಸಿ ಪ್ರಕಾರ ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಕೇಸ್ ಹಾಕಲು ಅನುಮತಿ ಕೊಡಬೇಕು ಎಂದು ನಾನು 6 ಪುಟಗಳ ವರದಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಕೋರಿದ್ದೇನೆ ಎಂದು ಡಿ. ರೂಪಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹೊಟ್ಟೆ ನೋವೆಂದು ಜಿಲ್ಲಾಸ್ಪತ್ರೆಗೆ ಬಂದು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ

For All Latest Updates

TAGGED:

ABOUT THE AUTHOR

...view details