ಬೆಂಗಳೂರು:ಯುವತಿ ಮೇಲೆ ಆ್ಯಸಿಡ್ ಹಾಕಿ ನಾಪತ್ತೆಯಾಗಿರುವ ಆರೋಪಿ ನಾಗೇಶನ ಮೇಲೆ ಕುಟುಂಬದವರು ಹಿಡಿಶಾಪ ಹಾಕಿದ್ದಾರೆ. ಅವನು ಏನಾದರೂ ಆಗಲಿ, ನಮಗೂ ಅವನಿಗೂ ಸಂಬಂಧವಿಲ್ಲ. ಅವನಿಂದ ನಮಗೆಲ್ಲಾ ತೊಂದರೆ ಆಗಿದೆ. ಅವನು ನಮ್ಮ ಮನೆಗೆ ಬರ್ತಾನೆ ಇರಲಿಲ್ಲ. ಈಗ ಪ್ರತಿದಿನ ನಾವು ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದೇವೆ ಎಂದು ನಾಗೇಶ್ ಮಾವ ಕೃಷ್ಣಪ್ಪ ಕಣ್ಣೀರಾಕಿದ್ದಾರೆ.
ಅವನು ಅಪ್ಪ ಅಮ್ಮನ ಜೊತೆ ಒಬ್ಬನೆ ವಾಸವಿದ್ದ. ನಮ್ಮ ಮನೆಗೆ ಅವನು ಬರುತ್ತಿರಲಿಲ್ಲ. ನಾನು ಅವರ ಅಕ್ಕನನ್ನ ಮದುವೆಯಾಗಿದ್ದೀನಿ. ಅವರ ಅಕ್ಕನ ಮದುವೆಯಾಗಿದ್ದೆ ತಪ್ಪಾಗಿ ಹೋಗಿದೆ. ನಮ್ಮ ಮನೆಯಲ್ಲಿ ನಾವು ಇದ್ದೀವಿ. ಆತನ ನೀಚ ಕೆಲಸಕ್ಕಾಗಿ ಗಾರ್ಮೆಂಟ್ಸ್ ಮಾರಿಬಿಟ್ಟೆ. ಊರಲ್ಲಿ ಜಮೀನು ಮಾರಿದೆ. ನಮಗೆ ಸಾಕಾಗಿ ಹೋಗಿದೆ ಎಂದು ನಾಗೇಶನ ಮಾವ ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.