ಕರ್ನಾಟಕ

karnataka

ETV Bharat / state

ಆ್ಯಸಿಡ್ ದಾಳಿ ಪ್ರಕರಣ: ಆರೋಪಿ ನಾಗೇಶ್​ ಬೈಕ್ ಪತ್ತೆ - ಆಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್​ ಬೈಕ್ ಬೆಂಗಳೂರಿನಲ್ಲಿ ಪತ್ತೆ

ಸುಂಕದ ಕಟ್ಟೆಯ ಬಳಿ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿ ಆರೋಪಿ ನಾಗೇಶ್ ಪರಾರಿಯಾಗಿದ್ದಾನೆ. ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತ ಯುವತಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದು, ಚಿಕಿತ್ಸೆ ಮುಂದುವರೆದಿದೆ.

ಆರೋಪಿ ನಾಗೇಶ್​
ಆರೋಪಿ ನಾಗೇಶ್​

By

Published : May 2, 2022, 9:17 PM IST

ಬೆಂಗಳೂರು: ಮದುವೆಯಾಗಲು ನಿರಾಕರಿಸಿದಕ್ಕೆ ಯುವತಿಯ ಮೇಲೆ ಆ್ಯಸಿಡ್ ದಾಳಿಯನ್ನು ಮಾಡಿ ಪರಾರಿಯಾಗಿರುವ ಆರೋಪಿ ನಾಗೇಶ್ ಬೈಕ್ ಮೆಜೆಸ್ಟಿಕ್‌ ಪಾರ್ಕಿಂಗ್ ಬಳಿ ಪತ್ತೆಯಾಗಿದೆ. ಆದರೆ, ಆರೋಪಿ ನಾಗೇಶ್ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ, 10 ಪೊಲೀಸರ ತಂಡಗಳು ಆತನಿಗಾಗಿ ಹುಡುಕಾಟ ನಡೆಸುತ್ತಿವೆ.

ಸುಂಕದ ಕಟ್ಟೆಯ ಬಳಿ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಆರೋಪಿ ನಾಗೇಶ್ ಪರಾರಿಯಾಗಿದ್ದಾನೆ. ದಾಳಿಗೊಳಗಾದ ಸಂತ್ರಸ್ತ ಯುವತಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ನರಳಾಡುತ್ತಿದ್ದು, ಚಿಕಿತ್ಸೆ ಮುಂದುವರೆದಿದೆ. ತಿರುಪತಿ, ತಮಿಳುನಾಡಿನ ದೇವಸ್ಥಾನಗಳಲ್ಲಿಯೂ ಕಿರಾತಕ ನಾಗೇಶ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಓದಿ:ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿ ನಾಪತ್ತೆ: ಕರಪತ್ರದ ಮೊರೆಹೋದ ಪೊಲೀಸರು

For All Latest Updates

TAGGED:

ABOUT THE AUTHOR

...view details