ಕರ್ನಾಟಕ

karnataka

ETV Bharat / state

ಟೆಂಪೋ ಟ್ರಾವೆಲರ್ ಕಳ್ಳತನ: ಆರೋಪಿ ಬಂಧನ - ಟೆಂಪೋ ಟ್ರಾವೆಲರ್ ಕದ್ದೊಯ್ದಿದ್ದ ಆರೋಪಿ ಬಂಧನ

ನಕಲಿ ಕೀ ಬಳಸಿ ಟೆಂಪೋ ಟ್ರಾವೆಲರ್ ಕದ್ದೊಯ್ದಿದ್ದ ಆರೋಪಿಯನ್ನು ಜ್ಞಾನಭಾರತಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

Accused of tempo traveller arrested in Bangalore
ಟೆಂಪೋ ಟ್ರಾವೆಲರ್ ಕದ್ದೊಯ್ದಿದ್ದ ಆರೋಪಿ ಬಂಧನ

By

Published : Mar 12, 2021, 4:56 PM IST

ಬೆಂಗಳೂರು‌:ಮನೆ ಮುಂದೆ ನಿಲ್ಲಿಸಿದ್ದ ಟೆಂಪೋ ಟ್ರಾವೆಲರ್ ಕದ್ದೊಯ್ದಿದ್ದ ಆರೋಪಿಯನ್ನು ಜ್ಞಾನಭಾರತಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಮೂಲದ ಬೋರೇಗೌಡ ಬಂಧಿತ ವ್ಯಕ್ತಿ. ಈ ಹಿಂದೆ ಅದೇ‌ ಟೆಂಪೋ ಟ್ರಾವೆಲರ್ ಚಾಲಕನಾಗಿದ್ದ ಈತ, ಕೆಲಸ ಬಿಟ್ಟ ನಂತರ ನಿರುದ್ಯೋಗಿಯಾಗಿದ್ದ. ಹೀಗಾಗಿ ನಕಲಿ ಕೀ ಬಳಸಿ ವಾಹನ ಕದ್ದೊಯ್ದಿದ್ದ ಎಂದು ತಿಳಿದುಬಂದಿದೆ.

ಪೊಲೀಸರು ಬಂಧಿತನಿಂದ ಅಂದಾಜು 5 ಲಕ್ಷ ರೂ ಮೌಲ್ಯದ 1 ಟೆಂಪೋ ಟ್ರಾವೆಲರ್ ವಶಕ್ಕೆ ಪಡೆದಿದ್ದಾರೆ.

For All Latest Updates

ABOUT THE AUTHOR

...view details