ಬೆಂಗಳೂರು: ನಗರದಲ್ಲಿ ಮತ್ತೆ ಬೈಕ್ ಕಳ್ಳತನದ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಈಗೀಗ ಐಷಾರಾಮಿ ಬೈಕ್ಗಳ ಮೇಲೆ ಕಳ್ಳರ ಕಣ್ಣು ಬಿದ್ದಂತೆ ಕಾಣುತ್ತಿದೆ. ಸಹಚರನ ಜೊತೆ ಸ್ಕೂಟಿಯಲ್ಲಿ ಬಂದ ಕಳ್ಳ ಪಲ್ಸರ್ 200 ಎನ್. ಎಸ್ ಬೈಕ್ ಕದ್ದೊಯ್ದಿರುವ ಪ್ರಕರಣ ಬೆಳಕಿಗೆ ಬಂದಿದೆ. ಕದ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ಅನ್ನು ರಾತ್ರೋರಾತ್ರಿ ಕದಿಯಲಾಗಿದೆ. ಶೋಕಿಗಾಗಿ ಕದ್ದು ಪೆಟ್ರೋಲ್ ಖಾಲಿಯಾಗುವರೆಗೆ ಓಡಿಸಿ ಬಿಟ್ಟು ಹೋಗುವ ಪ್ರಕರಣಗಳೂ ಸಹ ಸಾಕಷ್ಟು ಕಂಡು ಬರುತ್ತಿವೆ.