ಬೆಂಗಳೂರು: ಪಿಜಿಗೆ ಹೊಸದಾಗಿ ಬಂದಿರುವುದಾಗಿ ಹೇಳಿ ರೂಂನ ಕೀ ಪಡೆದ ಚಾಲಾಕಿವೋರ್ವ 1.9 ಲಕ್ಷ ರೂ. ಮೌಲ್ಯದ 2 ಲ್ಯಾಪ್‌ಟಾಪ್ ಕಳವು ಮಾಡಿ ಪರಾರಿಯಾಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ಬಿ.ಟಿ.ಎಂ ಲೇಔಟ್ 1 ನೆಯ ಹಂತದಲ್ಲಿರುವ ಭವಿಷ್ಯ ಪಿಜಿಯಲ್ಲಿ ಸ್ನೇಹಿತ ರಾಜ್‌ಶಾ ಜೊತೆಗೆ ಮಕರಂದ್ ಎಂಬುವರು ವಾಸಿಸುತ್ತಿದ್ದರು. ಸೆಪ್ಟೆಂಬರ್ 29ರ ಮಧ್ಯಾಹ್ನ 1 ಗಂಟೆಯಲ್ಲಿ ರೂಂಗೆ ಬಂದ ಅಪರಿಚಿತ ವ್ಯಕ್ತಿ ತಾನು ಹೊಸದಾಗಿ ಇದೇ ಪಿಜಿಗೆ ಸೇರಿದ್ದೇನೆ. ಮಾಲೀಕರು ಈ ರೂಂನಲ್ಲಿ ಇರಲು ಹೇಳಿದ್ದಾರೆ. ಕೀ ಕೊಟ್ಟರೆ ಲಗೇಜ್ ತರುತ್ತೇನೆ ಎಂದು ಹೇಳಿ ಮಕರಂದ್ ಬಳಿ ರೂಂನ ಕೀ ಪಡೆದಿದ್ದ.