ಬೆಂಗಳೂರು: ಜ್ಯೂಸ್‌ನಲ್ಲಿ ಮತ್ತು ಬರುವ ವಸ್ತು ಹಾಕಿ ಪತ್ನಿಗೆ ಕೊಟ್ಟು ಆಕೆ ಪ್ರಜ್ಞೆತಪ್ಪಿದ ಬಳಿಕ ನಗ್ನ ಚಿತ್ರ ಸೆರೆಹಿಡಿದು ಅದನ್ನು ಸ್ನೇಹಿತರಿಗೆ ಕಳುಹಿಸಿದ ಘಟನೆ ಬಸವನಗುಡಿ ಮಹಿಳಾ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆ (30) ದೂರಿನ ಆಧಾರದ ಮೇಲೆ ಆಕೆಯ ಪತಿ ವೆಂಕಟಸ್ವಾಮಿ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರುದಾರ ಮಹಿಳೆ 2013ರಲ್ಲಿ ಮೊದಲ ಪತಿಗೆ ವಿಚ್ಛೇದನ ನೀಡಿದ್ದು, ವೆಂಕಟಸ್ವಾಮಿಯನ್ನು ಪ್ರೀತಿಸಿ 2ನೇ ವಿವಾಹವಾಗಿದ್ದಳು. ವಿವಾಹವಾದ ಆರಂಭದಲ್ಲಿ ಪತ್ನಿ ಜತೆಗೆ ಅನ್ಯೋನ್ಯವಾಗಿದ್ದ ಪತಿ, ನಂತರ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಇತ್ತೀಚೆಗೆ ಆರೋಪಿಯು ಜ್ಯೂಸ್‌ನಲ್ಲಿ ಮತ್ತು ಬರುವ ವಸ್ತು ಬೆರೆಸಿ ಪತ್ನಿಗೆ ಕೊಟ್ಟಿದ್ದ. ಪತ್ನಿ ಪ್ರಜ್ಞೆ ತಪ್ಪಿದ ನಂತರ ಆಕೆಯ ನಗ್ನ ಚಿತ್ರ ಸೆರೆ ಹಿಡಿದು ಸ್ನೇಹಿತರಿಗೆ ಕಳುಹಿಸಿದ್ದ.