ಬೆಂಗಳೂರು: ಇತ್ತೀಚೆಗಷ್ಟೇ ಉಪಮೇಯರ್ ಸ್ಥಾನದಿಂದ ಕೆಳಗಿಳಿದ ನಾಗಪುರ ವಾರ್ಡ್ ನ ಭದ್ರೇಗೌಡರ ವಾರ್ಡ್ ನಲ್ಲೇ ಹಳೆ ಕಲ್ಲು, ಹೊಸ ಬಿಲ್ಲು ಹಗರಣ ಆರೋಪ ಕೇಳಿಬಂದಿದೆ.
ಮಾಜಿ ಉಪಮೇಯರ್ ಹೆಸರಲ್ಲಿ ಹಳೆ ಕಲ್ಲು, ಹೊಸ ಬಿಲ್ಲು ಹಗರಣ ಆರೋಪ - ಹಳೆ ಕಲ್ಲು, ಹೊಸ ಬಿಲ್ಲು ಹಗರಣ
ಬಿಬಿಎಂಪಿಯಲ್ಲಿ ಮತ್ತೆ ಹಳೆ ಕಲ್ಲು, ಹೊಸ ಬಿಲ್ಲು ಹಗರಣ ಸದ್ದು ಮಾಡಿದ್ದು, ಮಾಜಿ ಉಪಮೇಯರ್ ಸ್ಥಾನದಿಂದ ಕೆಳಗಿಳಿದ ನಾಗಪುರ ವಾರ್ಡ್ ನ ಭದ್ರೇಗೌಡರ ವಾರ್ಡ್ ನಲ್ಲೇ ಹಗರಣ ಆರೋಪ ಕೇಳಿಬಂದಿದೆ.
ಮಾಜಿ ಉಪಮೇಯರ್ ವಾರ್ಡ್ ನಲ್ಲಿರುವ ಉಷಾ ಪಾರ್ಕ್ನಲ್ಲಿ ಜಿಮ್ ಸಲಕರಣೆಗಳ ಬದಲಾವಣೆಗೆ ಈಗ ಟೆಂಡರ್ ಕರೆಯಲಾಗಿದೆ.ಆದ್ರೆ ವರ್ಷದ ಹಿಂದೆ ಹಾಕಿದ್ದ ಜಿಮ್ ಸಲಕರಣೆಗಳ ಬದಲಾವಣೆ ಅಗತ್ಯವಿಲ್ಲ. ಎಲ್ಲವೂ ಉತ್ತಮ ಸ್ಥಿತಿಯಲ್ಲಿ ಇರುವಾಗಲೇ ಮತ್ತೆ ರಿಪೇರಿ, ನವೀಕರಣ ಹೆಸರಲ್ಲಿ ಕೆಆರ್ಐಡಿಎಲ್ ನಿಂದ ಹಣ ಬಿಡುಗಡೆಯಾಗಿದೆ. ಈಗಾಗ್ಲೆ ಹತ್ತಕ್ಕೂ ಹೆಚ್ಚು ಜಿಮ್ ಉಪಕರಣಗಳು ಉತ್ತಮ ಸ್ಥಿತಿಯಲ್ಲಿದ್ದರೂ ಹೊಸ ಟೆಂಡರ್ ಅಗತ್ಯವೇನಿತ್ತು. ಜಿಮ್ ಸಲಕರಣೆ ಬದಲಾವಣೆಗೆ 25 ಲಕ್ಷ ಟೆಂಡರ್ ಕರೆಯಲಾಗಿದ್ದು, ಜತೆಗೆ ಉಷಾ ಪಾರ್ಕ್ ಇತರ ಅಭಿವೃದ್ಧಿಗಾಗಿ 20 ಲಕ್ಷ ಟೆಂಡರ್ ಮೊತ್ತ ಸಹ ಸೇರ್ಪಡೆ ಮಾಡಲಾಗಿದೆ. ಒಟ್ಟು ಉಷಾ ಪಾರ್ಕ್ ಗಾಗಿ 45 ಲಕ್ಷ ಸುರಿಯಲು ಸಿದ್ಧವಾಗಿದೆ ಇದು ಅಕ್ರಮ ಎಂದು ಬಿಜೆಪಿ ಮಾಜಿ ಮೇಯರ್ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಈ ಹಗರಣ ಸಂಬಂಧ ದೂರು ನೀಡಲು ಮಾಜಿ ಉಪಮೇಯರ್ ಮುಂದಾಗಿದ್ದಾರೆ.ಜತೆಗೆ 2013 ರಿಂದಲೂ 1 ಸಾವಿರ ಕೋಟಿ ಮಹಾಲಕ್ಷ್ಮೀ ಲೇಔಟ್ ಗೆ ಅನುದಾನ ಬಂದಿದೆ. ಈ ಎಲ್ಲ ಅನುದಾನದ ಬಗ್ಗೆ ತನಿಖೆಗೆ ಆಗ್ರಹಿಸಲು ಮಾಜಿ ಉಪಮೇಯರ್ ಹರೀಶ್ ಸಜ್ಜಾಗಿದ್ದಾರೆ.ಈ ನಡುವೆ ಪ್ರತಿಕ್ರಿಯೆ ಕೇಳಲು ಭದ್ರೇಗೌಡರನ್ನು ಸಂಪರ್ಕಿಸಿದರೆ, ಬೆಂಗಳೂರಲ್ಲಿ ಇಲ್ಲ, ಬಂದ ಮೇಲೆ ಉತ್ತರಿಸುತ್ತೇನೆ ಎನ್ನುತ್ತಾರೆ.