ಕರ್ನಾಟಕ

karnataka

ETV Bharat / state

ಮದುವೆಯಾಗೋದಾಗಿ ನಂಬಿಸಿ ಮೋಸ, ಸಂತ್ರಸ್ತ ವೈದ್ಯೆಯಿಂದ ದೂರು ದಾಖಲು - ಬೆಂಗಳೂರಿನಲ್ಲಿ ವೈದ್ಯೆಯಿಂದ ಅತ್ಯಾಚಾರ ಪ್ರಕರಣ ದಾಖಲು

ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ನನಗೆ ಮೋಸ ಮಾಡಿದ್ದಾನೆ. ನನಗೆ ನ್ಯಾಯ ಒದಗಿಸಿ ಎಂದು ಸಂತ್ರಸ್ತೆ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಂತ್ರಸ್ತ ವೈದ್ಯೆಯಿಂದ ದೂರು ದಾಖಲು

By

Published : Nov 13, 2019, 9:01 PM IST

ಬೆಂಗಳೂರು:ಖಾಸಗಿ ಆಸ್ಪತ್ರೆ ಮೇಲ್ವಿಚಾರಕ‌ ತನ್ನ ಅತ್ಯಾಚಾರ‌ವೆಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆ ವೈದ್ಯೆ ಆರೋಪಿಸಿ ದೂರು ದಾಖಲಿಸಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

ಸಂತ್ರಸ್ತೆ ಸಾಯಿರಾಮ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದು, ಮೇಲ್ವಿಚಾರಕ ಶ್ರೀಧರ್ ಶ್ರೀನಿವಾಸ್ ಮೆಡಿಸಿನ್ ವಿಚಾರವಾಗಿ ಮಾತನಾಡಬೇಕೆಂದು‌ ಅಂಜನಾಪುರದ ತನ್ನ ಅಪಾರ್ಟ್ಮೆಂಟ್​​ಗೆ ಕರೆಸಿ ಮದ್ಯ ಸೇವಿಸುವಂತೆ ಬಲವಂತ ಮಾಡಿದ್ದ . ಇದಕ್ಕೆ ಸಂತ್ರಸ್ತೆ ತಿರಸ್ಕರಿಸಿದ್ದಕ್ಕೆ ಕೋಣೆಯಲ್ಲಿ ಕೂಡಿಹಾಕಿ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. .

ಸಂತ್ರಸ್ತ ವೈದ್ಯೆಯಿಂದ ದೂರು ದಾಖಲು

ನಂತರ ಸಂತ್ರಸ್ತೆಯನ್ನ ನಂಬಿಸಿ ನಾನು ನಿನ್ನ ಮದುವೆಯಾಗುತ್ತೇನೆ ಎಂದು ಸ್ನೇಹ ಮುಂದುವರೆಸಿ. ಮಾತನಾಡಬೇಕೆಂದು ಕಾರಿನಲ್ಲಿ ಕರೆದೊಯ್ದು ಕೋಣನಕುಂಟೆ ಹೋಟೆಲ್​​ ಮುಂಭಾಗ ಕಾರು ಲಾಕ್ ಮಾಡಿ ಮತ್ತೆ ಅತ್ಯಾಚಾರವೆಸಗಿ ಬಳಿಕ ಮದುವೆ ಆಗುವುದಾಗಿ ನಂಬಿಸಿದ್ದಾನೆ. ನಂತರ ಹಣ ನೀಡಬೇಕು ಇಲ್ಲಾಂದ್ರೆ ಮರ್ಯಾದೆ ತೆಗೆಯುವುದಾಗಿ ಹೆದರಿಸಿ ಮೋಸ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾಳೆ. ಈಗ ಸಂತ್ರಸ್ತೆ ನನಗೆ ನ್ಯಾಯ ಒದಗಿಸುವಂತೆ ಆರೋಪಿ ಶ್ರೀಧರ್ ಶ್ರೀನಿವಾಸನ್ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇನ್ನು ಪೊಲೀಸರು ಐಪಿಸಿ ಸೆಕ್ಷನ್ 376,420,504,506 ಅಡಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ABOUT THE AUTHOR

...view details