ಕರ್ನಾಟಕ

karnataka

ETV Bharat / state

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಮೂವರು ಪೊಲೀಸ್ ವಶಕ್ಕೆ - ಅನ್ಯ ಧರ್ಮಿಯರ ಧಾರ್ಮಿಕ ಭಾವನೆಗೆ ಧಕ್ಕೆ

ಧಾರ್ಮಿಕ ಭಾವನೆಗೆ ಧಕ್ಕೆ - ಕ್ರಿಸ್ಮಸ್​ ವೇಳೆ ಮತಾಂತರಕ್ಕೆ ಆಮಿಷ - ಆಂಧ್ರಪ್ರದೇಶದ ಮೂವರ ಬಂಧನ

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ; ಮೂವರು ಪೊಲೀಸ್ ವಶಕ್ಕೆ
accused-of-hurting-religious-sentiments-three-are-in-police-custody

By

Published : Dec 30, 2022, 1:15 PM IST

ಬೆಂಗಳೂರು:ಅನ್ಯ ಧರ್ಮಿಯರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುತ್ತಿದ್ದ ಆರೋಪದಡಿ ಮೂವರು ಆರೋಪಿಗಳನ್ನ ಜೆ.ಜೆ‌. ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿಜಯ್, ಶೃತಿ ಹಾಗೂ ನೆಲ್ಸನ್ ಬಂಧಿತರು.

ಆಂಧ್ರ ಪ್ರದೇಶ ಮೂಲದವರಾದ ಆರೋಪಿಗಳು ನವೆಂಬರ್ 28ರಂದು ಜೆ.ಜೆ.ನಗರ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ 'ನೀವು ಕ್ರಿಸ್ಮಸ್ ಆಚರಿಸಿದರೆ, ನಿಮ್ಮ ಪಾಪಗಳು ವಿಮೋಚನೆಯಾಗುತ್ತದೆ. ಜೀಸಸ್ ನಿಮಗೆ ಒಳ್ಳೆಯದು ಮಾಡುತ್ತಾನೆ' ಎಂದು ತೆಲುಗು ಭಾಷೆಯ ಕರಪತ್ರ ಹಂಚುತ್ತಿದ್ದ ಆರೋಪವನ್ನು ಹೊಂದಿದ್ದಾರೆ. ಮಾತ್ರವಲ್ಲದೇ ಹಣ, ಸವಲತ್ತುಗಳ ಆಮಿಷವೊಡ್ಡಿ ಅನ್ಯ ಧರ್ಮೀಯರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಸೆಳೆಯುತ್ತಿದ್ದದನ್ನು ಗಮನಿಸಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ಬಂದ ಜೆ.ಜೆ.ನಗರ ಠಾಣಾ ಪೊಲೀಸರು ಯನಪ್ಪ ವಿಜಯ್ ಶೃತಿ ಮತ್ತು ನೆಲ್ಸನ್ ಎಂಬುವವರನ್ನ ವಶಕ್ಕೆ ಪಡೆದಿದ್ದು, ಕರ್ನಾಟಕ ರಾಜ್ಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಜ್ವರದಿಂದ ಬಳಲುತ್ತಿದ್ದ ಆರನೇ ತರಗತಿ ವಿದ್ಯಾರ್ಥಿ ಸಾವು: ಮೆದುಳು ಜ್ವರ ಶಂಕೆ

ABOUT THE AUTHOR

...view details