ಕರ್ನಾಟಕ

karnataka

ETV Bharat / state

ಕೋರಮಂಗಲ ಕೋವಿಡ್ ಕೇರ್​​ ಸೆಂಟರ್​ನಿಂದ ಆರೋಪಿ ಎಸ್ಕೇಪ್! - Accused escaped

ಕೋಣನಕುಂಟೆ ಠಾಣಾ ವ್ಯಾಪ್ತಿಯ ಜಂಬುಸವಾರಿ ದಿಣ್ಣೆ ಮುಖ್ಯ ರಸ್ತೆ ಬಳಿ ದರೋಡೆಗೆ ಯತ್ನಿಸಿ ಪೊಲೀಸರ ಕೈಗೆ ಆರೋಪಿಗಳಿಬ್ಬರು ಸಿಕ್ಕಿಬಿದ್ದಿದ್ದರು. ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ಇಬ್ಬರು ಆರೋಪಿಗಳನ್ನು ಸ್ವ್ಯಾಬ್ ಟೆಸ್ಟ್​ಗೆ ಒಳಪಡಿಸಿದಾಗ ಕೋವಿಡ್ ಸೋಂಕಿರುವುದು ಗೊತ್ತಾಗಿತ್ತು.

covid
ಕೋವಿಡ್

By

Published : Jul 25, 2020, 10:08 AM IST

ಬೆಂಗಳೂರು:ಕೋರಮಂಗಲದ ಎನ್​ಜಿವಿ ಕೋವಿಡ್ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ ಆರೋಪಿ ಎಸ್ಕೇಪ್ ಆಗಿದ್ದಾನೆ.

ಉತ್ತರ ಪ್ರದೇಶ ಮೂಲದ ರಾಜು ಖಾನ್ ಎಸ್ಕೇಪ್ ಆಗಿರುವ ಆರೋಪಿ. ಇದೇ ತಿಂಗಳು ಕೋಣನಕುಂಟೆ ಠಾಣಾ ವ್ಯಾಪ್ತಿಯ ಜಂಬುಸವಾರಿ ದಿಣ್ಣೆ ಮುಖ್ಯ ರಸ್ತೆ ಬಳಿ ದರೋಡೆಗೆ ಯತ್ನಿಸಿ ಪೊಲೀಸರ ಕೈಗೆ ಆರೋಪಿಗಳಿಬ್ಬರು ಸಿಕ್ಕಿಬಿದ್ದಿದ್ದರು. ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ಇಬ್ಬರು ಆರೋಪಿಗಳನ್ನು ಸ್ವ್ಯಾಬ್ ಟೆಸ್ಟ್​ಗೆ ಒಳಪಡಿಸಿದಾಗ ಕೋವಿಡ್ ಸೋಂಕಿರುವುದು ಗೊತ್ತಾಗಿದೆ.

ಈ ಸಂಬಂಧ ಜು. 17ರಿಂದ 22ರವರೆಗೆ ಕೋರಮಂಗಲದ ಎನ್​ಜಿವಿ ಕೋವಿಡ್ ಕೇರ್ ಸೆಂಟರ್​ನಲ್ಲಿದ್ದರು. ಈ ಪೈಕಿ ರಾಜು ‌ಖಾನ್ ಜು. 22ರಂದು ರಾತ್ರಿ ಕ್ವಾರಂಟೈನ್ ಕೇಂದ್ರದಿಂದ ತಲೆಮರೆಸಿಕೊಂಡಿದ್ದಾನೆ. ಈ ಸಂಬಂಧ ನೋಡಲ್ ಅಧಿಕಾರಿ ನೀಡಿದ ದೂರಿನ ಮೇರೆಗೆ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ABOUT THE AUTHOR

...view details