ಕರ್ನಾಟಕ

karnataka

ETV Bharat / state

ಹೊಸಕೋಟೆ: ಪೊಲೀಸರು ಅರೆಸ್ಟ್ ಮಾಡಲು ತೆರಳಿದಾಗ ಸೈನೇಡ್ ತಿಂದು ಸರಗಳ್ಳ ಆತ್ಮಹತ್ಯೆ - ಹೊಸಕೋಟೆ

ಆರೋಪಿ ಕಳ್ಳತನ ಕೃತ್ಯಕ್ಕೂ ಮೊದಲು ದೇವಾಲಯಕ್ಕೆ ತೆರಳಿ ಕೈ ಮುಗಿದು ಬರ್ತಿದ್ದ. ಹೀಗಾಗಿ ದೇವಾಲಯದ ಬಳಿ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ಜೇಬಿನಲ್ಲಿದ್ದ ಸೈನೇಡ್ ತಿಂದು ರಕ್ತಕಾರಿ ಶಂಕರ್ ಮೃತಪಟ್ಟಿದ್ದಾನೆ.

hosakote
ಶಂಕರ್ ಮೃತ ಆರೋಪಿ

By

Published : Jul 28, 2021, 10:32 PM IST

ಹೊಸಕೋಟೆ/ಬೆಂಗಳೂರು: ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಬಂಧಿಸಲು ತೆರೆಳಿದಾಗ ಸೈನೇಡ್ ತಿಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆಂಧ್ರ ಪ್ರದೇಶದ ಮದನಪಳ್ಳಿ ಮೂಲದ ಶಂಕರ್ ಮೃತ ಆರೋಪಿ. ಬೆಂಗಳೂರಿನ ಜಯನಗರ, ಬನಶಂಕರಿ, ಗಿರಿನಗರ ಮತ್ತು ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿ ಪೊಲೀಸರ ಕಣ್ಣತಪ್ಪಿಸಿಕೊಂಡಿದ್ದ. ಕೆ.ಆರ್ ಪುರ ಪೊಲೀಸರು ಈತನನ್ನು ಬಂಧಿಸಲು ತೆರಳಿದ ವೇಳೆ ಪೊಲೀಸರನ್ನು ನೋಡಿದ ಇಬ್ಬರು ಆರೋಪಿಗಳಲ್ಲಿ ಶಂಕರ್ ಎಂಬಾತ ಜೇಬಿನಲ್ಲಿದ್ದ ಸೈನೈಡ್ ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪೊಲೀಸರು ಅರೆಸ್ಟ್ ಮಾಡಲು ತೆರೆಳಿದಾಗ ಸೈನೇಡ್ ತಿಂದು ಸರಗಳ್ಳ ಆತ್ಮಹತ್ಯೆ

ಕೆಆರ್​​ಪುರ ವ್ಯಾಪ್ತಿಯಲ್ಲಿ 4 ಸರಗಳ್ಳತನ ಪ್ರಕರಣಗಳು ನಡೆದಿದ್ದವು. ಹೊಸಕೋಟೆ ತಾಲೂಕಿನ ಪಿಳ್ಳಗುಂಪೆ ಕೈಗಾರಿಕೆ ಪ್ರದೇಶದ ಬಳಿ ಆರೋಪಿಗಳು ಇದ್ದಾರೆ ಎಂಬ ಸುಳಿವಿನ ಮೇರೆಗೆ ಕೆಆರ್​​ಪುರಂ ಪೊಲೀಸರು ಪಿಳ್ಳಗುಂಪೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಆರೋಪಿಗಳನ್ನ ಬೆನ್ನು ಹತ್ತಿದ್ರು. ಈ ವೇಳೆ ಪೊಲೀಸರನ್ನು ನೋಡಿದ ಆರೋಪಿ ಶಂಕರ್ ಸೈನೇಡ್ ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ಆರೋಪಿ ಶಂಕರ್ ವೈ.ಎಸ್.ಆರ್ ಕಾಂಗ್ರೆಸ್​​ನಲ್ಲಿ ಗುರುತಿಸಿಕೊಂಡಿದ್ದ. ಶೇಖರ್ ಮತ್ತು ಚಂದ್ರಶೇಖರ್ ಆಂಧ್ರದಿಂದ ಬೆಂಗಳೂರಿಗೆ ಬಂದು ಸರಗಳ್ಳತನ ಮಾಡುತ್ತಿದ್ದರು. ಇವರ ಮೇಲೆ ಬೆಂಗಳೂರಿನ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಕಳ್ಳತನ ಕೃತ್ಯಕ್ಕೂ ಮೊದಲು ದೇವಾಲಯಕ್ಕೆ ತೆರಳಿ ಕೈ ಮುಗಿದು ಬರ್ತಿದ್ದ. ಹೀಗಾಗಿ ದೇವಾಲಯದ ಬಳಿ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ಜೇಬಿನಲ್ಲಿದ್ದ ಸೈನೇಡ್ ತಿಂದು ರಕ್ತಕಾರಿ ಶಂಕರ್ ಮೃತಪಟ್ಟಿದ್ದಾನೆ. ಅವನ ಜೊತೆಗಿದ್ದ ಮತ್ತೋರ್ವ ಆರೋಪಿ ಚಂದ್ರಶೇಖರ್​​ನನ್ನು ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details