ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಮುಂದುವರೆದ ರೌಡಿಗಳ ಅಟ್ಟಹಾಸ: ಮತ್ತೊಂದು ಕೊಲೆ ಯತ್ನ - attempt to murder case of bangalore

ಸೀನ ಎಂಬಾತನನ್ನು ಕೊಲೆ‌ ಮಾಡಿದ್ದ ಆರೋಪಿಗಳ ಬಂಧನಕ್ಕೆ ಉತ್ತರ ವಿಭಾಗದ ಪೊಲೀಸರು ಒಂದು ವಾರದಿಂದ ಹುಡುಕಾಟ ನಡೆಸುತ್ತಿದ್ದಾರೆ. ಆದ್ರೆ ಮೂರು ದಿನಗಳ ಹಿಂದೆ ಇದೇ ಆರೋಪಿಗಳು ಮತ್ತೊಂದು ಕೊಲೆಗೆ ಯತ್ನಿಸಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

accused attempt to murder again at bangalore
ಸಿಲಿಕಾನ್ ಸಿಟಿಯಲ್ಲಿ ಮುಂದುವರೆದ ರೌಡಿಗಳ ಅಟ್ಟಹಾಸ: ಮತ್ತೊಂದು ಕೊಲೆ ಯತ್ನ

By

Published : Jan 17, 2021, 11:23 AM IST

ಬೆಂಗಳೂರು: ನಗರದಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದ್ದು, ಆರೋಪಿಗಳಿಂದ ಮತ್ತೊಂದು ಕೊಲೆ ಯತ್ನ ನಡೆದಿದೆ.

ಆರೋಪಿಗಳಾದ ಅಂದ್ರಹಳ್ಳಿ ಅಭಿ ಪ್ರವೀಣ ಅಲಿಯಾಸ್ ಹಿಟಾಚಿ ಮತ್ತು ಮನೋಜ್ ಇಬ್ಬರು ಸೀನಾ ಎಂಬುವವರು ಕೇವಲ ಒಂದು ಫೋಟೋವನ್ನು ಸ್ಟೇಟಸ್​​ನಲ್ಲಿ ಹಾಕಿದ್ದಕ್ಕೆ ಕೋಪಗೊಂಡು ಮನೆಗೆ ಬಂದು ಚಾಕು ಇರಿದು ಕೊಲೆ ಮಾಡಿದ್ದರು. ಸೀನನ ಕೊಲೆ‌ ಮಾಡಿದ್ದ ಆರೋಪಿಗಳಿಗೆ ಉತ್ತರ ವಿಭಾಗದ ಪೊಲೀಸರು ಒಂದು ವಾರದಿಂದ ಹುಡುಕಾಟ ನಡೆಸುತ್ತಿದ್ದು, ಮೂರು ದಿನಗಳ ಹಿಂದೆ ಇದೇ ಆರೋಪಿಗಳು ಮತ್ತೊಂದು ಕೊಲೆಗೆ ಯತ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ವರ್ಷಗಳೇ ಕಳೆದರೂ ಈಡೇರದ ಸುಸಜ್ಜಿತ ಆಸ್ಪತ್ರೆ ಕನಸು.. ಉತ್ತರ ಕನ್ನಡ ಜಿಲ್ಲೆಯ ಜನರ ಗೋಳು ಕೇಳೋರು ಯಾರು?

ರಾಜಗೋಪಲ‌ನಗರದ ಪ್ರದೀಪ್ ಎಂಬುವವರನ್ನು ಕೊಲೆ ಮಾಡಲು ಯತ್ನಿಸಿದ್ದಾರೆ. ಪ್ರದೀಪ್, ಮೃತ ಸೀನ ಅವರ ಸ್ನೇಹಿತ ಮತ್ತು ದಲಿತ ಮುಖಂಡನಾಗಿದ್ದು, ಇವರ ಕೊಲೆಗೆ ಯತ್ನ ನಡೆದಿದೆ. ಸದ್ಯ ರಾಜಗೋಪಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details